ಡಿ. 06ರಂದು ವಿದ್ಯುತ್ ನಿಲುಗಡೆ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 05. 33 ಕೆ.ವಿ ಮಾಡಾವು-ಕಾವು-ಸುಳ್ಯ, ಮತ್ತು 33 ಕೆ.ವಿ ಮಾಡಾವು-ಕುಂಬ್ರ-ಸುಳ್ಯ ವಿದ್ಯುತ್ ಮಾರ್ಗದ ಪಾಲನಾಕಾರ್ಯ ಹಾಗೂ 33 ಕೆ.ವಿ ಲಿಂಕ್ ಲೈನ್ ಕಾಮಗಾರಿ ನಡೆಯಲಿರುವುದರಿಂದ ಡಿ.6ರಂದು ಪೂರ್ವಾಹ್ನ 10ರಿಂದ ಸಾಯಂಕಾಲ 5ಗಂಟೆಯವರಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.

 

ಆದ್ದರಿಂದ, 33/11ಕೆವಿ ಸುಳ್ಯ, ಕಾವು ಮತ್ತು ಕುಂಬ್ರ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11ಕೆವಿ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group