ಬಂಟ್ವಾಳ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ➤‌ ಗೋಮಾಂಸ ಸಹಿತ ಆರೋಪಿ ವಶಕ್ಕೆ



(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 28. ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರು ಗೋಮಾಂಸ ಹಾಗೂ ಬೈಕ್ ವಶಕ್ಕೆ ಪಡೆದ ಘಟನೆ ತಾಲೂಕಿನ ಪಾಂಡವರಕಲ್ಲು ಸಮೀಪದ ಕುದೂರು ಎಂಬಲ್ಲಿ ವರದಿಯಾಗಿದೆ.







ಬಂಧಿತ ಆರೋಪಿಯನ್ನು ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಈತನ ಜೊತೆಗೆ ಒಂದು ಲಕ್ಷ ರೂ. ಮೌಲ್ಯದ ಬೈಕ್ ಹಾಗೂ ದನದ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ‌. ಆರೋಪಿಯು ತನ್ನ ಮನೆಯ ಹಿಂಬದಿಯ ಅಕ್ರಮ ಕಟ್ಟಡದಲ್ಲಿ ಗೋಮಾಂಸ ಮಾಡಿ ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.






error: Content is protected !!
Scroll to Top