ಅತ್ಯುತ್ತಮ ಮೈಲೇಜ್ ನೀಡುವ ಮಾರುತಿ Suzuki XL6 CNG ಬಿಡುಗಡೆ

(ನ್ಯೂಸ್ ಕಡಬ) newskadaba.com ನ.02: ಸಿಎನ್ ಜಿ ಕಾರುಗಳು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿಯು ತನ್ನ ಪ್ರಮುಖ ಕಾರುಗಳಲ್ಲಿ ಸಿಎನ್ ಜಿ ಕಾರುಗಳ ಮಾದರಿಗಳ ಮಾರಾಟವನ್ನು ಹೆಚ್ಚಿಸುತ್ತಿದ್ದು, ಇದೀಗ ಕಂಪನಿಯು ತನ್ನ ಎಕ್ಸ್ಎಲ್6 ಎಂಪಿವಿ(XL6 MPV) ಕಾರು ಮಾದರಿಯಲ್ಲಿ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡಿದೆ. ಹೊಸ ಎಕ್ಸ್ಎಲ್6 ಸಿಎನ್ ಜಿ ಮಾದರಿಯು ಜೆಟಾ ವೆರಿಯೆಂಟ್ ನಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 12.24 ಲಕ್ಷ ಬೆಲೆ ಹೊಂದಿದೆ.

ಹೊಸ ಎಕ್ಸ್ಎಲ್6 ಸಿಎನ್ ಜಿ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು 1.5 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆ ಎಸ್-ಸಿಎನ್ ಜಿ ಕಿಟ್ ನೀಡಲಾಗಿದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 87 ಬಿಎಚ್ ಪಿ ಮತ್ತು 121 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಹೊಸ ಸಿಎನ್ ಜಿ ಆವೃತ್ತಿಯು ಪ್ರತಿ ಕೆಜಿಗೆ ಗರಿಷ್ಠ 26.32 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಈ ಮೂಲಕ ಇದು ಎಂಪಿವಿ ಕಾರುಗಳಲ್ಲಿಯೇ ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರಲಿದೆ.

Also Read  ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ಪರಿಹಾರ ➤ ಸಹಾಯಧನ ಘೋಷಿಸಿದ ಸರಕಾರ

ಹೊಸ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಸ್ಟ್ಯಾಂಡರ್ಡ್ ಪೆಟ್ರೋಲ್ ಮಾದರಿಯೆಂತೆ ಸಿಎನ್ ಜಿ ಮಾದರಿಯಲ್ಲಿ ವಿನ್ಯಾಸ ಮತ್ತು ಫೀಚರ್ಸ್ ನೀಡಿದ್ದು, ಹೆಚ್ಚುವರಿಯಾಗಿ ಸಿಎನ್ ಜಿ ಬ್ಯಾಡ್ಜ್ ನೊಂದಿಗೆ ಹೊಸ ಕಾರಿನಲ್ಲಿ 7.0 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಸ್ಟಾರ್ಟ್/ಸ್ಟಾಪ್ ಬಟನ್, ಕ್ರೂಸ್ ಕಂಟ್ರೋಲ್, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಪವರ್ ವಿಂಡೋಗಳು, ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವಾರು ಸೌಲಭ್ಯಗಳಿವೆ.

error: Content is protected !!
Scroll to Top