(ನ್ಯೂಸ್ ಕಡಬ) newskadaba.com ಅ.28: ಆಪಲ್‌ನ ತಾಂತ್ರಿಕ ಆವಿಷ್ಕಾರಗಳು ಹಲವಾರು ಬಾರಿ ಜೀವಗಳನ್ನು ಉಳಿಸಿವೆ. ಈ ಸಾಲಿಗೆ 12 ವರ್ಷದ ಬಾಲಕಿಯೊಬ್ಬಳು ಸೇರಿದ್ದಾಳೆ. ಆಪಲ್ ವಾಚ್‌ನಿಂದಾಗಿ ಆಕೆ ದೊಡ್ಡ ಆನಾರೋಗ್ಯಕಾರಿ ಗಂಡಾಂತರದಿಂದ ಪಾರಾಗಿದ್ದಾಳೆ. ಹಾಗಾಗಿ, ಬಾಲಕಿಯ ಕುಟುಂಬವು ಆಪಲ್ ವಾಚ್‌ನ ಸಾಮರ್ಥ್ಯಕ್ಕೆ ಧನ್ಯವಾದ ತಿಳಿಸಿದ್ದಾರೆ.
12 ವರ್ಷ ವಯಸ್ಸಿನ ಇಮಾನಿ ಮೈಲ್ ಅವರ ಆಪಲ್ ವಾಚ್ ಒಂದು ಸಂಜೆ ಅಸಾಮಾನ್ಯವಾಗಿ ಹೆಚ್ಚಿನ ಹೃದಯ ಬಡಿತದ ಬಗ್ಗೆ ಎಚ್ಚರಿಸಲು ಪ್ರಾರಂಭಿಸಿತು. ಆಗ ಎಚ್ಚೆತ್ತುಕೊಂಡ ಮೈಲ್ ಅನ್ನು ಆಕೆಯ ತಾಯಿ ಜೆಸ್ಸಿಕಾ ಕಿಚನ್ ಆಸ್ಪತ್ರೆಗೆ ಕರೆದೊಯ್ದರು. ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದಾಗ, ಬಾಲಕಿಯ ಅಪೆಂಡಿಕ್ಸ್‌ನಲ್ಲಿ ನ್ಯೂರೋಎಂಡೋಕ್ರೈನ್ ಗಡ್ಡೆ(ಕ್ಯಾನ್ಸರ್) ಇರುವುದನ್ನು ವೈದ್ಯರು ಪತ್ತೆ ಹಚ್ಚಿದರು. ಚಿಕ್ಕ ವಯಸ್ಸಿನಲ್ಲಿ ಕಂಡು ಬರುವ ವಿರಳ ಗಡ್ಡೆ ಇದು ಎಂದು ವೈದ್ಯರು ತಿಳಿಸಿದರು. ಈ ಕ್ಯಾನ್ಸರ್ ಈಗಾಗಲೇ ಮೈಲ್ ದೇಹದ ಇತರ ಭಾಗಗಳಿಗೆ ಹರಡಿದೆ ಎಂಬುದನ್ನು ವೈದ್ಯರು ಪತ್ತೆ ಹಚ್ಚಿದರು. ತಕ್ಷಣವೇ ಕ್ಯಾನ್ಸರ್ ಅನ್ನು ತೊಡೆದು ಹಾಕಲು ವೈದ್ಯರು ಸಿಎಸ್ ಮೋಟ್ ಚಿಡ್ರೆನ್ಸ್ ಶಸ್ತ್ರಚಿಕಿತ್ಸೆ ಕೈಗೊಂಡರು.
ಈ ಬಗ್ಗೆ ಅವರ್ ಡೆಟ್ರಾಯಿಟ್ ವರದಿ ಮಾಡಿದೆ. ಒಂದು ವೇಳೆ 12 ವರ್ಷದ ಬಾಲಕಿಯು ಆಪಲ್ ಕೈ ಗಡಿಯಾರವನ್ನು ಹೊಂದಿಲ್ಲದಿದ್ದರೆ, ತೀವ್ರ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತಿತ್ತು ಎಂದು ಆ ವರದಿಯಲ್ಲಿ ವಿವರಿಸಲಾಗಿದೆ.