ಕತ್ತು ಸೀಳಿಕೊಂಡು ಗುಡ್ಡದಿಂದ ಉರುಳಿಬಿದ್ದ ಯುವಕ..!! ➤ ಪ್ರಾಣ ರಕ್ಷಣೆಗಾಗಿ ಗೋಗರೆತ



(ನ್ಯೂಸ್ ಕಡಬ) newskadaba.com ಧಾರವಾಡ, ಜು. 19. ಕತ್ತು ಸೀಳಿಕೊಂಡು ಗುಡ್ಡದಿಂದ ಉರುಳಿ ಬಂದ ಯುವಕನೋರ್ವ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಾ ಪ್ರಾಣ ಉಳಿಸುವಂತೆ ಗೋಗರೆಯುತ್ತಿದ್ದ ದಯನೀಯ ಘಟನೆಯೊಂದು ಧಾರವಾಡದ ಹೊರವಲಯದಲ್ಲಿ ನಡೆದಿದೆ.








ಗಾಯಾಳು ಯುವಕನನ್ನು ಹಾವೇರಿ ಮೂಲದ ನವೀನ್ ದೊಡ್ಡಮನಿ(30) ಎಂದು ಗುರುತಿಸಲಾಗಿದೆ. ಈತ ನುಗ್ಗೆಕೇರಿ ಗುಡ್ಡದಿಂದ ಹೊರಳಿಕೊಂಡು ಕೆಳಕ್ಕೆ ಬಿದ್ದಿದ್ದು, ಈ ವೇಳೆ ಆತ ಕತ್ತು ಕುಯ್ದ ಸ್ಥಿತಿಯಲ್ಲಿದ್ದು ಬಟ್ಟೆಯೆಲ್ಲಾ ರಕ್ತಸಿಕ್ತವಾಗಿತ್ತು. ಗುಡ್ಡದಿಂದ ಬಿದ್ದ ಆತ ಜನರನ್ನು ಕಂಡು ಪ್ರಾಣ ಉಳಿಸುವಂತೆ ಗೋಗರೆದಿದ್ದಾನೆ‌. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಯಾರೋ ಆತನನ್ನು ಕತ್ತು ಸೀಳಿ ಕೊಲೆಗೆ ಯತ್ನಿಸಿರುವ ಬಗ್ಗೆ ಶಂಕಿಸಲಾಗಿದೆ. ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top