ಅಲೆಟ್ಟಿ: ಕೃಷಿ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆ ಹಿಂಡು ➤ ಅಪಾರ ಕೃಷಿ ಬೆಳೆ ನಾಶ.!

(ನ್ಯೂಸ್ ಕಡಬ) newskadaba.com ಅಲೆಟ್ಟಿ, ಜು. 01. ಗ್ರಾಮದ ಮೈಂದೂರು ನಿವಾಸಿ ವಿಶ್ವನಾಥ ಗೌಡ ಎಂಬವರ ಕೃಷಿ ತೋಟಕ್ಕೆ ತಡರಾತ್ರಿಯಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿ, ಅಪಾರ ಪ್ರಮಾಣದ ಕೃಷಿ ನಾಶ ಮಾಡಿದ ಘಟನೆ ವರದಿಯಾಗಿದೆ.

ಆನೆ ಹಿಂಡಿನ ದಾಳಿಯಿಂದಾಗಿ ಸುಮಾರು‌ 75 ತೆಂಗಿನ ಮರ, 50 ಬಾಳೆಗಿಡ ಹಾಗೂ ಹತ್ತು ಅಡಿಕೆ ಮರಗಳನ್ನು ನಾಶಪಡಿಸಿದಲ್ಲದೇ ತೋಟಕ್ಕೆ ಅಳವಡಿಸಲಾಗಿದ್ದ ನೀರಿನ ಪೈಪ್ ನ್ನು ಕೂಡಾ ಪುಡಿಗಟ್ಟಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

Scroll to Top