ಸುಳ್ಯ: ಮಗುವನ್ನು ಜೊತೆಗೆ ಕಟ್ಟಿಕೊಂಡು ಕೆರೆಗೆ ಹಾರಿದ ತಾಯಿ- ಮೃತ್ಯು..! ➤ ಅದೃಷ್ಟವಶಾತ್ ಬದುಕುಳಿದ ಮಗು

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 29. ಮಗುವನ್ನು ಜೊತೆಗೆ ಕಟ್ಟಿಕೊಂಡು ತಾಯಿಯು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ ನಡೆದಿದೆ.


ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ತಳೂರು ದಯಾನಂದ ಎಂಬವರ ಪತ್ನಿ ಗೀತಾ ಎಂದು ಗುರುತಿಸಲಾಗಿದೆ. ಇವರು ಎನ್.ಎಮ್.ಸಿ ನಲ್ಲಿ ಕಛೇರಿ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಮಗು ಅದೃಷ್ಟವಶಾತ್ ಕೆರೆಯೊಳಗಿದ್ದ ಕಲ್ಲಿನ ಸಹಾಯದಿಂದ ಬದುಕುಳಿದಿದ್ದು, ಸ್ಥಳೀಯರ ಸಹಾಯದಿಂದ ರಕ್ಷಿಸಿ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Scroll to Top