ಕೈಕಂಬ: ಓವರ್ ಟೇಕ್ ಮಾಡುವ ಸಂದರ್ಭ ಬೈಕ್ ಸ್ಕಿಡ್ ➤ ಯುವಕ ಸ್ಥಳದಲ್ಲೇ ಮೃತ್ಯು..!



(ನ್ಯೂಸ್ ಕಡಬ) newskadaba.com ಕೈಕಂಬ, ಜೂ. 13. ಓವರ್‌ಟೇಕ್‌ ಮಾಡುವ ಭರದಲ್ಲಿ ಬೈಕ್‌ ಸ್ಕಿಡ್‌ ಆಗಿ ಸವಾರ ಮೃತಪಟ್ಟ ಘಟನೆ ಗಂಜಿಮಠ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗುರುಪುರ ಕೈಕಂಬ ಎಂಬಲ್ಲಿ‌ ನಡೆದಿದೆ.







 

ಮೃತ ಯುವಕನನ್ನು ಕೆರೆಕಾಡಿನ ಪ್ರವೀಣ್ ಎಂದು ಗುರುತಿಸಲಾಗಿದೆ. ಮೂಡುಬಿದಿರೆಯಿಂದ ಕೈಕಂಬದ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಈತ ಇನ್ನೊಂದು ಬೈಕ್ ನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಬೈಕ್‌ ಸ್ಕಿಡ್‌ ಕಾರಿನಡಿಗೆ ಬಿದ್ದಿದ್ದಾರೆ. ಪರಿಣಾ. ಪ್ರವೀಣ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಳೆಯ ಕಾರಣದಿಂದ ಹೆದ್ದಾರಿ ಜಾರುತ್ತಿದ್ದು, ಪ್ರವೀಣ್‌ ಅವರು ಹೆಲ್ಮೆಟ್‌ ಹಾಕದೇ ಇರುವುದು ಸಾವಿಗೆ ಕಾರಣ ಎಂದೆನ್ನಲಾಗಿದೆ.






 

error: Content is protected !!
Scroll to Top