ಚರಣ್ ರಾಜ್ ಹತ್ಯೆ ಪ್ರಕರಣ ➤ ಆರೋಪಿಯ ಗುರುತು ಪತ್ತೆ..?!

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ. 05. ಕಳೆದೆರಡು ವರ್ಷಗಳ ಹಿಂದೆ ಹಿಂಜಾವೇ ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಪ್ರಮುಖ ಆರೋಪಿ ಚರಣ್ ರಾಜ್ ಅವರ ಹತ್ಯೆಗೈದಿರುವುದು ಕಾರ್ತಿಕ್ ಮೇರ್ಲ ಸ್ನೇಹಿತ ಕಿಶೋರ್ ಪೂಜಾರಿ ಹಾಗೂ ತಂಡದ ಕೃತ್ಯ ಎಂದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚರಣ್ ರಾಜ್ ಅವರು ತನ್ನ ಮಾವ ಕಿಟ್ಟಣ್ಣ ರೈ ಅವರ ಮೆಡಿಕಲ್ ಶಾಪ್ ನ ಶುಭಾರಂಭದ ಹಿನ್ನೆಲೆ ಪೆರ್ಲಂಪಾಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳ ತಂಡ ತಲವಾರಿನಿಂದ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಘಟನೆಯ ಸಂದರ್ಭ ಚರಣ್ ರಾಜ್ ಜೊತೆಗಿದ್ದ ನವೀನ್ ಕುಮಾರ್ ಎಂಬಾತ ದುಷ್ಕರ್ಮಿಗಳ ಪೈಕಿ ಓರ್ವನ ಗುರುತು ಹಿಡಿದಿದ್ದು, ಆತ ಕಿಶೋರ್ ಕಲ್ಲಡ್ಕ ಎಂದೆನ್ನಲಾಗಿದೆ. ಪ್ರಕರಣಕ್ಮೆ ಸಂಬಂಧಿಸಿ ನವೀನ್ ಕುಮಾರ್ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Scroll to Top