(ನ್ಯೂಸ್ ಕಡಬ) newskadaba.com ಕಡಬ, ಜ. 16. ನಾಪತ್ತೆಯಾಗಿದ್ದ ತಾಲೂಕಿನ ಕೋಡಿಂಬಾಳದ ಯುವತಿ ಮದುವೆಯಾಗಿ ಧರ್ಮಸ್ಥಳದಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ.
ಕಡಬ ಗಾಣದಗುಂಡಿ ದಿವ್ಯ ಎಂಬಾಕೆ ಕಳೆದ ಎರಡು ದಿನಗಳ ಹಿಂದೆ ಮನೆಯಿಂದ ಹೋದವರು ವಾಪಾಸು ಹಿಂತಿರುಗದೆ ನಾಪತ್ತೆಯಾಗಿದ್ದರು ಎಂದು ಆಕೆಯ ತಂದೆ ದೂರು ನೀಡಿದ್ದರು. ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರು ಯುವತಿ ಹಾಗೂ ಆಕೆಯ ಪತಿ ರುಕ್ಮಯ ಮುಗೇರ ಅವರನ್ನು ಧರ್ಮಸ್ಥಳದಲ್ಲಿ ಪತ್ತೆಹಚ್ಚಿದ್ದಾರೆ.