ಕಡಬ: ಆಸಿಡ್ ಸೇವಿಸಿ ಕೇರಳದ ವ್ಯಕ್ತಿ ಮೃತ್ಯು…!

(ನ್ಯೂಸ್ ಕಡಬ) newskadaba.com ಕಡಬ, ಜ. 12. ಆಸಿಡ್ ಸೇವಿಸಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ತಾಲೂಕಿನ ಕುದ್ಮಾರು ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟವರನ್ನು ಮೂಲತಃ ಕೇರಳದ ಶ್ರೀಧರನ್ ಕಾಣಿ ಎಂದು ಗುರುತಿಸಲಾಗಿದೆ. ಇವರು ಕುದ್ಮಾರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು, ರಬ್ಬರ್ ಟ್ಯಾಪಿಂಗ್ ವೃತ್ತಿ ಮಾಡುತ್ತಿದ್ದರು. ಇವರು ರಬ್ಬರ್ ಶೀಟ್ ಮಾಡಲು ಉಪಯೋಗಿಸುವ ಆಸಿಡ್ ನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ಜೊತೆಗಿದ್ದ ರೆಝಿ ಆರ್ ಸೋಮರಾಜ್ ಎಂಬವರು ಸ್ಥಳೀಯರ ಸಹಾಯದಿಂದ ಪುತ್ತೂರು ಆಸ್ಪತ್ರೆಗೆ ದಾಖಲಿಸಿ, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡುವ ಹೋಗುವ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಈ ಕುರಿತು ಮೃತರ ಮಗ ಶ್ರೀ ಜಿತ್ ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group