ಪಿಕಪ್ ವಾಹನ ಪಲ್ಟಿ ➤ ಚಾಲಕ ಸ್ಥಳದಲ್ಲೇ ಮೃತ್ಯು.!

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಡಿ. 01. ಪಿಕಪ್ ವಾಹನವೊಂದು ಪಲ್ಟಿಯಾದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಮಂಗಳೂರು- ಮೂಡಬಿದಿರೆ ರಾ. ಹೆದ್ದಾರಿಯ ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯ ಹಂಡೇಲುಸುತ್ತು ಎಂಬಲ್ಲಿ ನಡೆದಿದೆ.


ಮೃತ ಚಾಲಕನನ್ನು ಎಡಪದವು ಕನ್ನೊಳಿ ನಿವಾಸಿ ಯಾದವ(38) ಎಂದು‌ ಗುರುತಿಸಲಾಗಿದೆ. ಇವರು ಮಂಗಳವಾರದಂದು ರಾತ್ರಿ ಮೂಡಬಿದಿರೆಯಿಂದ ಎಡಪದವು ಕಡೆಗೆ ತೆರಳುತ್ತಿದ್ದ ವೇಳೆ, ಹಂಡೇಲು ತಿರುವಿನಲ್ಲಿ ವಾಹನ ಪಲ್ಟಿಯಾಗಿ ತೆಂಗಿನ ಮರಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರ ಎನ್ನಲಾಗಿದೆ. ಈ ಕುರಿತು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಭಟ್ಕಳ: ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ಸಂಜೆ ಸಿಎಂ ಭೇಟಿ

error: Content is protected !!
Scroll to Top