ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪ ನಿರ್ದೇಶಕರಾಗಿ ಡಾ.ಧರ್ಮಪಾಲ್ ನೇಮಕ

(ನ್ಯೂಸ್ ಕಡಬ) Newskadaba.com ಕಡಬ, ಅ. 23. ತಾಲೂಕಿನ ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪ ನಿರ್ದೇಶಕರಾಗಿ ಡಾ. ಧರ್ಮಪಾಲ್ ಕರಂದ್ಲಾಜೆಯವರು ಅಧಿಕಾರ ಸ್ವೀಕರಿಸಿದ್ದಾರೆ.

ಈ ಹಿಂದೆ ಎರಡು ಬಾರಿ ಪ್ರಭಾರ ಉಪನಿರ್ದೇಶಕರಾಗಿ ಕೊಯಿಲ ಫಾರ್ಮ್ ನಲ್ಲಿ ಸೇವೆ ಸಲ್ಲಿಸಿದ್ದ ಸಂದರ್ಭ ಪ್ರಥಮ ಬಾರಿಗೆ ದೇಶೀ ತಳಿಯ ಮಲೆನಾಡು ಗಿಡ್ಡ ತಳಿಗಳನ್ನು ಫಾರ್ಮ್‌ಗೆ ನಿಯೋಜಿಸಿದ್ದರು. ಧರ್ಮಪಾಲ್ ಕರಂದ್ಲಾಜೆಯವರು ಪಶು ವೈದ್ಯ ಸೇವಾ ಇಲಾಖೆ ಹಾಗೂ ಪಶು ಆಸ್ಪತ್ರೆ ಪುತ್ತೂರು ಇಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

Scroll to Top