ಆಟವಾಡುತ್ತಿದ್ದ ವೇಳೆ‌ ಮೊಬೈಲ್ ಬ್ಯಾಟರಿ‌ ಸ್ಫೋಟ ➤ ಬಾಲಕ ಗಂಭೀರ

(ನ್ಯೂಸ್ ಕಡಬ) Newskadaba.com ಹಾವೇರಿ, ಜು. 17. ಬಾಲಕನೋರ್ವ ಆಟವಾಡುತ್ತಿದ್ದ ವೇಳೆ ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಬಾಲಕ ಗಾಯಗೊಂಡಿರುವ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಹುರಳಿಕುಪ್ಪಿ ಎಂಬಲ್ಲಿ ನಡೆದಿದೆ.

ಗಾಯಗೊಂಡ ಬಾಲಕನನ್ನು ಕಾರ್ತಿಕ್ (10) ಎಂದು ಗುರುತಿಸಲಾಗಿದೆ. ಈತ ಆಟವಾಡುತ್ತಿದ್ದ ವೇಳೆ ಮನೆಯ ಪಕ್ಕದಲ್ಲಿ ಮೊಬೈಲ್ ನ ಹಳೆಯ ಬ್ಯಾಟರಿಯೊಂದು ಸಿಕ್ಕಿದ್ದು, ಇದನ್ನು ಕೈಯಲ್ಲಿ ಹಿಡಿದುಕೊಂಡು ಬಾಲಕ ಆಟವಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಬ್ಯಾಟರಿ ಸ್ಫೋಟಗೊಂಡಿದ್ದು, ಬಾಲಕನ ಮುಖ ಹಾಗೂ ಕೈಗೆ ಗಾಯಗಳಾಗಿವೆ.

Scroll to Top