ಮೆಸ್ಕಾಂನಿಂದ 3 ತಿಂಗಳ ಕರೆಂಟ್ ಬಿಲ್ ಮನ್ನಾ ಸುದ್ದಿ ವೈರಲ್ ➤ ಈ ಬಗ್ಗೆ ಮೆಸ್ಕಾಂ ಹೇಳಿದ್ದೇನು..?

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.14. ರಾಜ್ಯದಲ್ಲಿನ ಬಡ ಮತ್ತು ಮಧ್ಯಮ ವರ್ಗದ ಕುಟುಂಬದವರ 3 ತಿಂಗಳ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡುವ ಬಗ್ಗೆ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದು ಸುಳ್ಳು ಸುದ್ದಿಯಾಗಿದೆ ಎಂದು ಮೆಸ್ಕಾಂ ಸ್ಪಷ್ಟಪಡಿಸಿದೆ.

ಬಡ ಮತ್ತು ಮಧ್ಯಮ ವರ್ಗದ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ ಮೆಸ್ಕಾಂ ಕಂಪನಿಯು ಮೂರು ತಿಂಗಳ ಕರೆಂಟ್ ಬಿಲ್ಲನ್ನು ಮನ್ನಾ ಮಾಡಿದೆ. ಆಧಾರ್ ಕಾರ್ಡ್ ಮತ್ತು ಕರೆಂಟ್ ಬಿಲ್ಲಿನ ಪ್ರತಿ ಮತ್ತು ಬಿಪಿಎಲ್ ಕಾರ್ಡ್ ನ ಜೆರಾಕ್ಸ್ ಪ್ರತಿಯನ್ನು ಹತ್ತಿರದ ಮೆಸ್ಕಾಂ ಇಲಾಖೆಗೆ ಸಲ್ಲಿಸುವಂತೆ ಮೆಸ್ಕಾಂನ ಲೆಟರ್ ಹೆಡ್ ನಲ್ಲಿ ಎಡಿಟ್ ಮಾಡಿದಂತಹ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಾರೋ ಕಿಡಿಗೇಡಿಗಳು ಮೆಸ್ಕಾಂನ ಲೆಟರ್ ಹೆಡ್ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವುದು ಇದೀಗ ವೈರಲ್ ಆಗುತ್ತಿದೆ.

 

 

 

error: Content is protected !!

Join the Group

Join WhatsApp Group