ಸುರತ್ಕಲ್: ಆಟವಾಟಲೆಂದು ನೀರಿಗೆ ಇಳಿದ ಬಾಲಕ ಸಮುದ್ರಪಾಲು



(ನ್ಯೂಸ್ ಕಡಬ) newskadaba.com ಸುರತ್ಕಲ್, ಫೆ. 28. ಇಲ್ಲಿನ ಗುಡ್ಡೆಕೊಪ್ಪ ಬೀಚ್ ನಲ್ಲಿ ಆಟವಾಡಲೆಂದು ಇಳಿದ ಶಿವಮೊಗ್ಗ ಮೂಲದ 13 ವರ್ಷದ ಬಾಲಕ ಸಮುದ್ರ ಪಾಲಾದ ಘಟನೆ ನಡೆದಿದೆ.





ಮೃತ ಬಾಲಕನನ್ನು ಮುಬಾರಕ್ (13) ಎಂದು ಗುರುತಿಸಲಾಗಿದೆ. ತಂದೆ, ತಾಯಿ ಜೊತೆ ಗುಡ್ಡೆಕೊಪ್ಲ ಬೀಚ್ ಗೆ ಬಂದಿದ್ದನು. ನೀರಿನಲ್ಲಿ ಆಟವಾಡಲೆಂದು ತಂದೆ ಹಾಗೂ ಮಗ ಇಳಿದಿದ್ದು, ಸಮುದ್ರದ ಅಲೆಗಳಿಗೆ ಸಿಲುಕಿ ನೀರುಪಾಲಾಗಿದ್ದಾರೆ. ಈ ಸಂದರ್ಭ ನೀರಿನಲ್ಲಿ ಕೊಚ್ಚಿ ಹೋಗಿದ್ದ ತಂದೆಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಬಾಲಕನ ಪತ್ತೆಗಾಗಿ ಸ್ಥಳೀಯರು ಮತ್ತು ಸಿಎಸ್ ಪಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.






error: Content is protected !!
Scroll to Top