► ಅಡುಗೆ ಮಾಹಿತಿ ► ರುಚಿಯಾದ ಅಕ್ಕಿ ಪಾಯಸ ಮಾಡುವ ವಿಧಾನ

(ನ್ಯೂಸ್ ಕಡಬ) newskadaba.com ಅಡುಗೆ ಮಾಹಿತಿ, ಅ.20. ದಕ್ಷಿಣ ಭಾರತದಲ್ಲಿ ಅಕ್ಕಿ ಪಾಯಸ ತುಂಬಾ ಫೇಮಸ್. ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಅಕ್ಕಿ ಪಾಯಸವನ್ನು ಮಾಡ್ತಾರೆ. ಆದರೆ ಕೆಲವರಿಗೆ ಪಾಯಸ ಮಾಡುವ ವಿಧಾನ ತಿಳಿದಿರುವುದಿಲ್ಲ. ಅಕ್ಕಿ ಪಾಯಸ ಮಾಡುವ ಸುಲಭ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

► ಕೆನೆಭರಿತ ಹಾಲು- 1 ಲೀಟರ್
► ನೆನೆಸಿದ ಬಾಸುಮತಿ ಅಕ್ಕಿ- 1/4 ಬೌಲ್
► ಸಕ್ಕರೆ- 7 ಚಮಚ
► ಸಣ್ಣಗೆ ಕಟ್ ಮಾಡಿದ ಬಾದಾಮಿ- 2 ಚಮಚ
► ಕೇಸರಿ ಎಳೆಗಳು- 6(ನೆನೆಸಿಟ್ಟುಕೊಳ್ಳಿ)
► ಏಲಕ್ಕಿ ಪಡಿ- ಸ್ವಲ್ಪ

ಮಾಡುವ ವಿಧಾನ:
► ಒಂದು ಪಾತ್ರೆಯಲ್ಲಿ ಹಾಲು ಹಾಕಿ ಸ್ಟೌವ್ ಮೇಲೆ ಕುದಿಯಲು ಬಿಡಿ.
► ಹಾಲು ಕುದಿಯುತ್ತಿದ್ದಂತೆಯೇ ನೆನೆಸಿದ ಅಕ್ಕಿಯನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. (ಬೇಯಿಸಿದ ಅನ್ನವಿದ್ದರೆ ಅದನ್ನು ಬಳಸಬಹುದು)
► ಅಕ್ಕಿ ಬೇಯುತ್ತಾ ಬಂದಂತೆ ಬೆಂಕಿಯ ಉರಿಯನ್ನು ಕಡಿಮೆ ಮಾಡಿ. ಯಾಕಂದ್ರೆ ಇದರಿಂದ ಅಕ್ಕಿ ತಳ ಹಿಡಿಯುವುದು ತಪ್ಪುತ್ತೆ.
► ಅಕ್ಕಿ ಬೆಯುತ್ತಿದ್ದಂತೆಯೇ ಹಾಲಿನ ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ. ಈ ವೇಳೆ ಅದಕ್ಕೆ ಸಕ್ಕರೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ 2 ನಿಮಿಷಗಳ ಕಾಲ ಕುದಿಯಲು ಬಿಡಿ.
► ಅಕ್ಕಿ ಚೆನ್ನಾಗಿ ಬೆಂದ ಬಳಿಕ ಏಲಕ್ಕಿ ಪುಡಿ, ಕಟ್ ಮಾಡಿಟ್ಟುಕೊಂಡ ಬಾದಾಮಿ ಹಾಗೂ ನೆನೆಸಿಕೊಂಡ ಕೇಸರಿ ಎಳೆಗಳನ್ನು ಸೇರಿಸಿ.
► ನಂತ್ರ ಸ್ಟೌವ್ ಆಫ್ ಮಾಡಿ ಪಾತ್ರೆಯನ್ನು ಕೆಳಗಿಳಿಟ್ಟು ಪಾಯಸವನ್ನು ಇನ್ನೊಂದು ಪಾತ್ರೆಗೆ ಹಾಕಿ ರುಚಿಯಾದ ಪಾಯಸವನ್ನು ಸವಿಯಿರಿ.

Also Read  ಕಾಸರಗೋಡು: ದಾಖಲೆಗಳಿಲ್ಲದ 5.93 ಲಕ್ಷ ರೂ. ಹಣ ವಶ

(ಕೃಪೆ: ಪಬ್ಲಿಕ್ ಟಿವಿ)

error: Content is protected !!
Scroll to Top