ಅರಂತೋಡು: ಎಸ್ಕೆಎಸ್ಸೆಸ್ಸೆಫ್ ಸ್ಥಾಪಕ ದಿನಾಚರಣೆ



(ನ್ಯೂಸ್ ಕಡಬ) newskadaba.com ಅರಂತೋಡು, ಫೆ. 19. ಎಸ್ ಕೆ ಎಸ್ಎಸ್ಎಫ್ ಶಾಖೆಯ ವತಿಯಿಂದ ಎಸ್ ಕೆ ಎಸ್ಎಸ್ಎಫ್ ಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಅರಂತೋಡು ಮಸೀದಿ ವಠಾರದಲ್ಲಿ ಇಂದು ನಡೆಯಿತು.







ಇದರ ಅಧ್ಯಕ್ಷತೆಯನ್ನು ಅರಂತೋಡು ಶಾಖೆಯ ಅಧ್ಯಕ್ಷ ತಾಜುದ್ದೀನ್ ವಹಿಸಿದ್ದರು. ಅರಂತೋಡು ಬದ್ರಿಯಾ ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸಾಖ್ ಬಾಖವಿ ದುವಾ ನೆರವೇರಿಸಿ ಪ್ರಾಸ್ತಾವಿಕ ವಿಷಯ ಮಾತನಾಡಿದರು. ಅರಂತೋಡು ಮಸೀದಿಯ ಅಡಳಿತ ಮಂಡಳಿ ಅಧ್ಯಕ್ಷ ಹಾಜಿ ಅಶ್ರಫ್ ಗುಂಡಿ ಧ್ವಜರೋಹಣಗೈದು ಶುಭಾ ಹಾರೈಸಿದರು. ಸಮಾರಂಭದಲ್ಲಿ ಅರಂತೋಡು ಜಮಾಅತ್ ಕಾರ್ಯದರ್ಶಿ ಕೆ.ಎಮ್. ಮೂಸಾನ್, ಸಾಜಿದ್ ಅಝ್ಹರಿ ಪೇರಡ್ಕ, ಸ್ವಲಾತ್ ಸಮಿತಿ ಉಪಾಧ್ಯಕ್ಷ ಕೆ.ಎಮ್. ಅಬೂಬಕ್ಕರ್ ಪಾರೆಕ್ಕಲ್, ನುಸ್ರತುಲ್ ಇಸ್ಲಾಂ ಮದರಸ ಮ್ಯಾನೇಜ್‌ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ, ಜಮಾಅತ್ ಮಾಜಿ ಅಧ್ಯಕ್ಷ ಹಾಜಿ ಕೆ.ಎಮ್. ಮಹಮ್ಮದ್, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಮಾಜಿ ಅಧ್ಯಕ್ಷ ಹನೀಫ್, ಶಂಸುದ್ದೀನ್ ಪೆಲ್ತಡ್ಕ, ಮುಸ್ತಫಾ ಎ.ಎ, ಅರಂತೋಡು ಶಾಖೆಯ ಮಾಜಿ ಅಧ್ಯಕ್ಷ ಅಶೀಕ್ ಕುಕ್ಕುಂಬಳ, ಸದಸ್ಯರಾದ ಮುಝಮ್ಮಿಲ್ ಹಾಗುಯ ಬಾತಿಶಾ ಉಪಸ್ಥಿತರಿದ್ದರು. ಅರಂತೋಡು ಶಾಖೆಯ ಕಾರ್ಯದರ್ಶಿ ಜುಬೈರ್ ಸ್ವಾಗತಿಸಿ, ವಂದಿಸಿದರು.






error: Content is protected !!
Scroll to Top