ಅರಂತೋಡು: ಶಿಕಾರಿಗೆಂದು ಹೊರಟಿದ್ದ ನಾಲ್ವರ ಪೈಕಿ ಓರ್ವನಿಗೆ ಗುಂಡೇಟು



(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 05. ಶಿಕಾರಿಗೆಂದು ಹೋಗಿದ್ದ ನಾಲ್ವರು ಯುವಕರ ಪೈಕಿ ಓರ್ವನಿಗೆ ಗುಂಡು ತಗುಲಿ ಗಾಯಗೊಂಡ ಘಟನೆ ನಡೆದಿದೆ.





ಅರಂತೋಡಿನ ನಾಲ್ವರು ಯುವಕರು ಗುರುವಾರ ರಾತ್ರಿ ಶಿಕಾರಿಗೆಂದು ಪೂಮಲೆ ಕಾಡಿಗೆ ಹೋಗಿದ್ದ ವೇಳೆ ಈ ಘಟನೆ ಸಂಭವಿಸಿದೆ. ಇವರೆಲ್ಲರೂ ಬೇರೆ ಬೇರೆ ಕಡೆ ಕುಳಿತು ಕಾಡುಪ್ರಾಣಿಗಳ ನಿರೀಕ್ಷೆಯಲ್ಲಿದ್ದಾಗ ಶಬ್ದ ಬಂದ ಕಡೆಗೆ ಓರ್ವ ಗುಂಡು ಹಾರಿಸಿದ್ದು, ಅದು ಆ ಕಡೆ ಕುಳಿತಿದ್ದ ಸತ್ಯಮೂರ್ತಿ ಎಂಬ ಯುವಕನಿಗೆ ತಾಗಿತ್ತು. ಗುಂಡೇಟಿಗೆ ಒಳಗಾದ ಸತ್ಯಮೂರ್ತಿಯನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಳ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






error: Content is protected !!
Scroll to Top