ಸಾಲ್ಮರ :ಸಹೋದರಿ ಮನೆಯಲ್ಲಿದ್ದ ಅವಿವಾಹಿತೆ ನಾಪತ್ತೆ ಪ್ರಕರಣ ➤ ಮಂಗಳೂರಿನಲ್ಲಿ ಅವಿವಾಹಿತೆ ಪತ್ತೆ

(ನ್ಯೂಸ್ ಕಡಬ) newskadaba.com ಸಾಲ್ಮರ, ಡಿ.09: ಅವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಮಹಿಳೆಯನ್ನು ಮಂಗಳೂರಿನಲ್ಲಿ ಪತ್ತೆ ಮಾಡುವ ಮೂಲಕ ಪೊಲೀಸರು ಯಶಸ್ವಿಯಾಗಿದ್ದಾರೆ.

Xl

ನಾಪತ್ತೆಯಾಗಿದ್ದ ಮಹಿಳೆ ಮಂಗಳೂರು ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶಾರದಾ ಅವರನ್ನು ಇಂದು (ಡಿ.09) ಮಂಗಳೂರಿನ ಬಸ್ ನಿಲ್ದಾಣದಲ್ಲಿ ಪತ್ತೆ ಮಾಡಿದ್ದಾರೆ.ನಗರದ ಪರ್ಲಡ್ಕ ಎಂಬಲ್ಲಿನ ನಿವಾಸಿ ಶಾರದಾ (55) ನಾಪತ್ತೆಯಾಗಿದ್ದರು. ಶಾರದಾ ಅವರು ಅವಿವಾಹಿತೆಯಾಗಿದ್ದು, ಕಳೆದ ಕೆಲ ಸಮಯಗಳಿಂದ ಸಾಲ್ಮರದಲ್ಲಿರುವ ಸಹೋದರಿ ಪುಷ್ಪಲತಾ ಎಂಬವರೊಂದಿಗೆ ವಾಸವಾಗಿದ್ದರು. ಸೋಮವಾರ ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದ ಅವರು, ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.ಈ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದ್ಯ ನಾಪತ್ತೆಯಾಗಿದ್ದ ಮಹಿಳೆಯನ್ನು ಮಂಗಳೂರಿನಲ್ಲಿ ಪತ್ತೆ ಮಾಡಲಾಗಿದೆ.

 

Scroll to Top