ಜೋ ಬಿಡೆನ್ ಪತ್ನಿಯ ನೀತಿ ನಿರ್ದೇಶಕಿ “ಮಾಲಾ ಅಡಿಗ” ಕುಂದಾಪುರ ಮೂಲದವರು

(ನ್ಯೂಸ್ ಕಡಬ) newskadaba.com ಉಡುಪಿ . 23: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್‌ ಅವರ ಪತ್ನಿ ಜಿಲ್ ಬಿಡೆನ್‌ ನೀತಿ ನಿರ್ದೇಶಕರಾಗಿ ಭಾರತ ಮೂಲದ ಮಾಲಾ ಅಡಿಗ (47) ನೇಮಕ ಗೊಂಡಿದ್ದಾರೆ.ಮಾಲಾ ಅಡಿಗ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಕಕ್ಕುಂಜೆ ಅಡಿಗ ಕುಟುಂಬಕ್ಕೆ ಸೇರಿದ್ದಾರೆ.

 

ಮಾಲಾ ಅಡಿಗರ ಪತಿ ಚಾರ್ಲ್ಸ್‌ ಬೀರೋ ಕೂಡಾ ವಕೀಲರಾಗಿದ್ದು, 15 ರ ಹರೆಯದ ಮಗಳಿದ್ದಾಳೆ. ಅಮೆರಿಕದಲ್ಲೇ ಹುಟ್ಟಿ ಬೆಳೆದಿರುವ ಮಾಲಾ ಅಡಿಗ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್‌ ಅವರ ಪತ್ನಿ ಜಿಲ್ ಬಿಡೆನ್‌ ಹಿರಿಯ ಸಲಹೆಗಾರರಾಗಿ ಹಾಗೂ ಬಿಡೆನ್‌ ಕಮಲಾ ಹ್ಯಾರಿಸ್ ಪರ ಪ್ರಚಾರ ಅಭಿಯಾನದ ಹಿರಿಯ ನೀತಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

 

 

Scroll to Top