ಹಲವು ನಿರ್ಬಂಧಗಳೊಂದಿಗೆ ಹಜ್ ಯಾತ್ರೆಗೆ ಡೇಟ್ ಫಿಕ್ಸ್ ➤ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

(ನ್ಯೂಸ್ ಕಡಬ) newskadaba.com ನವದೆಹಲಿ, ನ. 07. 2021ನೇ ಸಾಲಿನ ಹಜ್‌ ಯಾತ್ರೆಯು ಜೂ.26 ರಿಂದ ಆರಂಭವಾಗಲಿದೆ ಎಂದು ಭಾರತೀಯ ಹಜ್‌ ಸಮಿತಿಯು ತಿಳಿಸಿದೆ. ಕೊರೋನಾ ಪರಿಸ್ಥಿತಿಯಿಂದಾಗಿ ಈ ಬಾರಿ ನಿರ್ಬಂಧಗಳನ್ನು ವಿಧಿಸಲಾಗಿದ್ದು, 18-65 ವರ್ಷದವರಿಗೆ ಮಾತ್ರ ಈ ಬಾರಿಯ ಹಜ್  ಯಾತ್ರೆಗೆ ಅವಕಾಶ ಇರಲಿದೆ. ಇದಕ್ಕಾಗಿ ಅರ್ಜಿ ಸಲ್ಲಿಕೆಯು ಇಂದಿನಿಂದ  ಆರಂಭಗೊಂಡು, ಡಿ.10ರಂದು ಅರ್ಜಿ ಸಲ್ಲಿಕೆಗೆ ಕಡೇ ದಿನವಾಗಿದೆ. ಇದರಲ್ಲಿ 500 ಸೀಟುಗಳನ್ನು ಮಾತ್ರ ಮಹಿಳೆಯರಿಗೆ ಮೀಸಲಿಡಲಾಗಿದೆ ಎಂದು ತಿಳಿಸಿದೆ.

ಪುರುಷ ಜೊತೆಗಾರರು ಇಲ್ಲದ ಮಹಿಳೆಯರು, 4 ಮಂದಿಯ ಗುಂಪೊಂದನ್ನು ಮಾಡಿಕೊಂಡು ತೆರಳಬೇಕು ಎನ್ನುವ ನಿಯಮವನ್ನು ಈ ಬಾರಿ ಮೂರಕ್ಕೆ ಇಳಿಸಲಾಗಿದೆ. ಒಂದಕ್ಕಿಂತ ಹೆಚ್ಚು ಕೋಟಾದಲ್ಲಿ ಅರ್ಜಿ ಸಲ್ಲಿಸಿದವರ ಹೆಸರನ್ನು 2021ರ ಜನವರಿಯಲ್ಲಿ ಲಾಟರಿ ತೆಗೆಯುವ ಮೂಲಕ ಆಯ್ಕೆ ಮಾಡಲಾಗುವುದು, ಅಲ್ಲದೇ ಈ ಬಾರಿಯ ಹಜ್‌ ವೆಚ್ಚವನ್ನೂ ಕೂಡಾ ಹೆಚ್ಚಳ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Also Read  ಸಹೋದ್ಯೋಗಿ ಮಹಿಳೆ ಜೊತೆ ಸಬ್ ಇನ್ಸ್‌ಪೆಕ್ಟರ್ ಸರಸ ಸಲ್ಲಾಪ ➤ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೋಡಿ

error: Content is protected !!
Scroll to Top