(ನ್ಯೂಸ್ ಕಡಬ) newskadaba.comಅಗರ್ತಲಾ, ನ. 01. 90 ವರ್ಷದ ವೃದ್ದೆಯೋರ್ವರ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಉತ್ತರ ತ್ರಿಪುರ ಜಿಲ್ಲೆಯ ಕಾಂಚನಪುರ ಉಪವಿಭಾಗದ ಬಾರ್ ಹಲ್ದಿ ಎಂಬಲ್ಲಿ ನಡೆದಿದೆ.
ವೃದ್ದೆ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಮನೆಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರದ ಬಳಿಕ ವೃದ್ದೆ ಅಸ್ವಸ್ಥರಾಗಿದ್ದರಿಂದ ಪೊಲೀಸರಿಗೆ ವಿಚಾರ ತಿಳಿಸಿರಲಿಲ್ಲ. ಬಳಿಕ ಈ ವಿಚಾರ ಸಂಬಂಧಿಕರ ಗಮನಕ್ಕೆ ಬಂದಿದ್ದು, ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಆರೋಪಿಗಳು ಅತ್ಯಾಚಾರವೆಸಗಿ ಪರಾರಿಯಾಗಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭಾನುಪದ ಚಕ್ರವರ್ತಿ ಹೇಳಿದ್ದಾರೆ.