ಐವರ್ನಾಡು : ರಬ್ಬರ್ ಗೋಡೌನ್ ಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ

(ನ್ಯೂಸ್ ಕಡಬ) newskadaba.com ಐವರ್ನಾಡು . 24:  ರಬ್ಬರ್ ಗೋಡೌನ್ ಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ ನಂಭವಿಸಿದೆ. ಐವರ್ನಾಡು ಗ್ರಾಮದ ಚೀಮುಳ್ಳು ಎಂಬಲ್ಲಿರುವ ಗಾಗೇಶ್ ಬೊಮ್ಮೆಟ್ಟಿ ಎಂಬುವರ ಮನೆಗೆ ಹೊಂದಿಕೊಂಡಿರುವ ರಬ್ಬರ್ ಗೋಡೌನ್, ಸ್ನಾನಗೃಹ, ಶೌಚಾಲಯಕ್ಕೆ ಕಳೆದ ದಿನ ರಾತ್ರಿ ಬೆಂಕಿ ಹತ್ತಿಕೊಂಡಿದೆ.

ಪರಿಣಾಮ ಸುಮಾರು 75,000 ಸಾವಿರ ಅಧೀಕ ಮೌಲ್ಯದ ರಬ್ಬರ್ ಶೀಟ್ ಗಳು ಸುಟ್ಟು ಹೋಗಿವೆ. ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿಯವರು ಮತ್ತು ಗ್ರಾಮ ಪಂಚಾಯತ್ ನವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Scroll to Top