ಉಡುಪಿ: ಊಟ ಮುಗಿಸಿ ಬರುತ್ತಿದ್ದ ಯುವಕ ಕುಸಿದು ಮೃತ್ಯು.!

(ನ್ಯೂಸ್ ಕಡಬ) newskadaba.com ಉಡುಪಿ, ಅ. 12: ಬಾರೊಂದರಲ್ಲಿ ಊಟ ಮುಗಿಸಿ ಹೊರ ಬರುತ್ತಿದ್ದಾಗ ಯುವಕನೋರ್ವ ಅಲ್ಲೆ ಕುಸಿದು ಬಿದ್ದು ಮೃತ ಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ. 23 ವರುಷದ ಸಚಿನ್ ಎಂಬಾತ ಮೃತ ಪಟ್ಟ ಯುವಕ

 

ಉದ್ಯಾವರ ಸಂಪಿಗೆನಗರ ನಿವಾಸಿ ಸಚಿನ್ ಎಂಬಾತ ಪಂದುಬೆಟ್ಟು ಬಾರೊಂದರಲ್ಲಿ ತನ್ನ ಸ್ನೇಹಿತರೊಂದಿಗೆ ಊಟ ಮಾಡಿ ಹೊರ ಬರುತ್ತಿದ್ದ ಸಂದರ್ಭದಲ್ಲಿ, ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸ್ನೇಹಿತರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಆದರೆ ಅದಾಗಲೇ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಯುವಕ ಸಚಿನ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಈ ಕುರಿತು ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Scroll to Top