ನೆಹರುನಗರದಲ್ಲಿ ಆಟವಾಡುತ್ತಿದ್ದ ಬಾಲಕ ನಾಪತ್ತೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.12: ಕಬಕ ಗ್ರಾಮದ ನೆಹರು ನಗರ ಎಂಬಲ್ಲಿ ಆಟವಾಡುತ್ತಿದ್ದ ಬಾಲಕ ರಾತ್ರಿಯಾದರೂ ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ಅ.9 ರಂದು ನಡೆದಿದೆ.

 

 

ನಾಪತ್ತೆಯಾದ ಬಾಲಕ ಕಬಕ ನೆಹರುನಗರ ನಿವಾಸಿ ಮಹಮ್ಮದ್‌ ಆಲಿಯವರ 9 ವರ್ಷದ ಬಾಲಕ ಫೈರೋಜ್‌ ಎಂದ ಗುರುತಿಸಲಾಗಿದೆ. ಬಾಲಕ ನಾಪತ್ತೆಯಾದ ಕುರಿತು ತಡವಾಗಿ ದೂರು ನೀಡಿದ್ದಾರೆ. ಬಳಿಕ ಎಲ್ಲೂ ಸುಳಿವು ಸಿಗದ ಹಿನ್ನಲೆಯಲ್ಲಿ ಬಾಲಕನ ತಾಯಿ ಕಳೆದ ದಿನ ದೂರು ನೀಡಿದ್ದು, ಪುತ್ತೂರು ಮಹಿಳಾ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Scroll to Top