ಅಂತರಾಷ್ಟ್ರೀಯ ಕರಾಟೆಯಲ್ಲಿ ಮಹಮ್ಮದ್ ಇಶಾಮ್‌ಗೆ ಚಿನ್ನದ ಪದಕ

(ನ್ಯೂಸ್‌ ಕಡಬ) newskadaba.com, ಅ.09 . ಪುಣೆ: ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 9 ವರ್ಷದ ಮಹಮ್ಮದ್ ಇಶಾಮ್ ಚಿನ್ನದ ಪದಕ ಗೆದ್ದಿದ್ದಾರೆ.32 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ ಇಶಾಮ್, ಭಾರತ ತಂಡವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಇದಕ್ಕೂ ಮೊದಲು ಮಂಗಳೂರಿನ ಜಿಲ್ಲಾ ಮಟ್ಟದಲ್ಲಿ, ಬೆಂಗಳೂರಿನ ರಾಜ್ಯ ಮಟ್ಟದಲ್ಲಿ ಹಾಗೂ ಮುಂಬೈನ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಗಳಿಸಿದ್ದರು.ಮಹಮ್ಮದ್ ಇಶಾಮ್ ಅವರು ಹಾಜಿ ಕೆ.ಕೆ. ಇಸ್ಮಾಯಿಲ್ ಕೋಲ್ಪೆ ಮತ್ತು ರಮ್ಜೀನ ದಂಪತಿಯ ಪ್ರಥಮ ಪುತ್ರ.

ಅವರು ಜ್ಞಾನೋದಯ ಬೆಥನಿ ನೆಲ್ಯಾಡಿ ಶಾಲೆಯ ವಿದ್ಯಾರ್ಥಿ.ಇಶಾಮ್ ಅವರ ಈ ಸಾಧನೆ ಇಡೀ ಊರಿಗೆ, ರಾಜ್ಯಕ್ಕೆ ಹಾಗೂ ನಮ್ಮ ರಾಷ್ಟ್ರಕ್ಕೆ ಕೀರ್ತಿ ತಂದಿರುವ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲೂ ಅವರು ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲಿ ಎಂದು ಹಾರೈಸುತ್ತೇವೆ.

Scroll to Top