ಕ್ಯಾನ್ಸರ್ ಔಷಧಗಳ ದುಬಾರಿ ದರಕ್ಕೆ ಬೀಳಲಿದೆ ಕಡಿತ: ಬೆಲೆ ಇಳಿಕೆಗೆ ಕೇಂದ್ರದ ಕೌಂಟ್‌ಡೌನ್ ಶುರು

(ನ್ಯೂಸ್‌ ಕಡಬ) newskadaba.com, ಅ.09 ನವದೆಹಲಿ: ಕ್ಯಾನ್ಸರ್ ನಿರೋಧಕ ಜೀವ ರಕ್ಷಕ ಔಷಧಗಳನ್ನು ಕೈಗೆಟುಕುವ ದರದಲ್ಲಿ ಸಾಮಾನ್ಯ ಜನರಿಗೆ ತಲುಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಬೆಲೆ ನಿಯಂತ್ರಣಕ್ಕೆ ಒಳಪಡದ ಕ್ಯಾನ್ಸರ್ ಔಷಧಗಳ ಎಂಆರ್‌ಪಿ ಮೇಲಿನ ವ್ಯಾಪಾರ ಲಾಭಾಂಶವನ್ನು ಶೇ. 30ಕ್ಕೆ ನಿಗದಿಪಡಿಸುವ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಇದರಿಂದ ಔಷಧಗಳ ಚಿಲ್ಲರೆ ಬೆಲೆಯಲ್ಲಿ ಶೇ. 70ರಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ.ಈ ನಿಯಮವು ಬ್ರಾಂಡೆಡ್, ಜೆನೆರಿಕ್, ದೇಶೀಯ ಹಾಗೂ ಆಮದು ಮಾಡಿಕೊಳ್ಳಲಾದ ಎಲ್ಲಾ ಕ್ಯಾನ್ಸರ್ ಔಷಧಗಳಿಗೂ ಅನ್ವಯಿಸಲಿದೆ.

ಖಾಸಗಿ ಆಸ್ಪತ್ರೆಗಳು ಮತ್ತು ಮಾರಾಟಗಾರರು ತಯಾರಿಕಾ ವೆಚ್ಚಕ್ಕಿಂತ ಹತ್ತಾರು ಪಟ್ಟು ಹೆಚ್ಚು ಬೆಲೆ ನಿಗದಿಪಡಿಸುವುದಕ್ಕೆ ಈ ಕ್ರಮದಿಂದ ಕಡಿವಾಣ ಬೀಳಲಿದ್ದು, ದೇಶದ ರೋಗಿಗಳಿಗೆ ವಾರ್ಷಿಕ ಸುಮಾರು ₹2,500 ಕೋಟಿ ಉಳಿತಾಯವಾಗಲಿದೆ.ವಿಭಾಗೀಯ ಸಮಿತಿಯ ಅಂತಿಮ ಒಪ್ಪಿಗೆಯ ನಂತರ ಕೇಂದ್ರ ಸರ್ಕಾರ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಯಿದೆ.

Scroll to Top