ಹ್ಯಾಲೋವೀನ್ ಗೆಟಪ್‌ ಹಾಕಿಕೊಂಡು ಎಲ್ಲರ ಗಮನ ಸೆಳೆದ ಪುಟ್ಟ ಬಾಲಕ

(ನ್ಯೂಸ್ ಕಡಬ) newskadaba.com ಅಮೆರಿಕಾ, ಅ.11: ಹ್ಯಾಲೋವೀನ್ ಹಬ್ಬ ಸಮೀಪಿಸುತ್ತಲೇ ಅಮೆರಿಕದ ಮಕ್ಕಳು ರಂಗುರಂಗಿನ ಧರಿಸುಗಳನ್ನು ಹಾಕಿಕೊಳ್ಳಲು ಸಜ್ಜಾಗುತ್ತಿದ್ದಾರೆ.

 

 

ಭೂತ-ದೆವ್ವಗಳ ಆಚರಣೆಯಾದ ಈ ಹ್ಯಾಲೋವಿನ್ ಹಬ್ಬಕ್ಕೆ ಮಕ್ಕಳು ಚಿತ್ರವಿಚಿತ್ರ ಪೋಷಾಕು ಧರಿಸಿಕೊಂಡು ನೆರೆಹೊರೆಯ ಮನೆಯವರ ಬಳಿ ತೆರಳಿ ತಿಂಡಿ ತಿನಿಸುಗಳನ್ನು ಪಡೆದುಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಇಲ್ಲೊಬ್ಬ ಪುಟ್ಟ ಬಾಲಕನೊಬ್ಬ ನಿಯಾನ್‌ ಲೈಟ್ ‌ಗಳನ್ನು ಹಾಕಿಕೊಂಡು, ಹ್ಯಾಲೋವಿನ್ ಗೆಟಪ್‌ನಲ್ಲಿ ತನ್ನೂರಿನ ಬೀದಿಗಳಲ್ಲಿ ಅಡ್ಡಾಡುತ್ತಾ ಸುದ್ದಿ ಮಾಡಿದ್ದಾನೆ. ಬಾಲಕನ ಫೋಟೋವನ್ನು ಇದೀಗ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಖತ್‌ ವೈರಲ್ ಆಗಿ ಹತ್ತು ಲಕ್ಷಕ್ಕೂ ಹೆಚ್ಚು ವೀವ್ಸ್‌ಗಳನ್ನು ಪಡೆದುಕೊಂಡಿದೆ.

Also Read  ಅಗ್ನಿ ಅವಘಡಕ್ಕೆ ತುತ್ತಾದ 40 ಜನರಿದ್ದ ಬಸ್ ; ತಪ್ಪಿದ ಭಾರೀ ಅನಾಹುತ

 

error: Content is protected !!
Scroll to Top