ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಗೆ ಶರಣಾದ ವಿವಾಹಿತೆ



(ನ್ಯೂಸ್ ಕಡಬ) newskadaba.com ಮಂಗಳೂರು , ಸೆ.13:  ವಿವಾಹಿತ ಯುವತಿಯೋರ್ವಳು ಡೆತ್‌ನೋಟ್ ಬರೆದಿಟ್ಟು, ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗುರುಪುರದ ಭಜನಾ ಮಂದಿರ ಸಮೀಪದ ನಿವಾಸಿ, 28 ವರುಷ ಪ್ರಾಯದ ವಿವಾಹಿತೆ ಶಿಲ್ಪಾ  ಆತ್ಮಹತ್ಯೆಗೈದವರು.





 

ಈಕೆ ಬಜ್ಪೆ ಪೇಟೆಯ ಜ್ಯುವೆಲ್ಲರಿ ಅಂಗಡಿಯೊಂದರ ಮಾಲಕರೊಬ್ಬರ ಪುತ್ರಿ. ಇವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಊರಿಗೆ ಬಂದಿದ್ದ ಈಕೆ ‘ಮನೆಯಿಂದಲೇ ಕೆಲಸ’ ನಿರ್ವಹಿಸುತ್ತಿದ್ದರು. ಈಕೆಯ ಪತಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಈಕೆಗೆ 11 ತಿಂಗಳ ಮಗುವೊಂದಿದೆ ಎಂದು ತಿಳಿದುಬಂದಿದೆ. ಸಾಯುವ ಮುನ್ನ ಈಕೆಯು ಡೆತ್ ನೋಟ್ ಬರೆದಿಟ್ಟಿದ್ದಾಳೆ. ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.






 

 

error: Content is protected !!
Scroll to Top