(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಸೆ. 06. ಇಲ್ಲಿನ ದರ್ಖಾಸ್ತು ಎಂಬಲ್ಲಿ ಕಲ್ಲೋಣಿಯ ಮದ್ರಸದ ಸಮೀಪ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬವೊಂದು ಅಪಾಯವನ್ನು ಆಹ್ವಾನಿಸುವ ರೀತಿಯಲ್ಲಿದೆ. ಈ ಕಂಬದಲ್ಲಿ ಮೈನ್ ಲೈನ್ ಸೇರಿದಂತೆ ಹಲವು ವಿದ್ಯುತ್ ಲೈನ್ ಗಳು ಹಾದುಹೋಗಿದೆ. ಅಲ್ಲದೇ ಕಂಬದ ಮಧ್ಯದಲ್ಲಿ ಬಿರುಕು ಬಿಟ್ಟಿದ್ದರಿಂದ ಒಳಗಿನಿಂದ ಕಬ್ಬಿಣದ ಸರಳುಗಳು ಎದ್ದು ಕಾಣುತ್ತಿವೆ.

ಕಂಬದ ಮಧ್ಯದಲ್ಲಿ ತುಂಡಾದ ಹಾಗೆ ಕಾಣುತ್ತಿದ್ದು, ಕಂಬದ ಹತ್ತಿರವೇ ಒಂದು ಮಾವಿನ ಮರವೂ ಇದ್ದುದ್ದರಿಂದ ಭಾರೀ ಗಾಳಿಗೆ ಮುರಿದು ಬೀಳುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಮೆಸ್ಕಾಂ ಇಲಾಖೆಯವರು ಈ ಬಗ್ಗೆ ಗಮನ ಹರಿಸಿ ಕೂಡಲೇ ವಿದ್ಯುತ್ ಕಂಬ ಬದಲಾವಣೆ ಮಾಡಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.









