ನೆಲ್ಯಾಡಿ: ಕಂದಕವನ್ನು ಕೆಡವಿ ತೋಟಕ್ಕೆ ನುಗ್ಗುತ್ತಿರುವ ಕಾಡಾನೆಗಳು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ. 02. ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪೆರಿಯಶಾಂತಿ, ಮಣ್ಣಗುಂಡಿ  ಪ್ರದೇಶದಲ್ಲಿ ಕಳೆದ 8 ದಿನಗಳಿಂದ  ಬೀಡು ಬಿಟ್ಟ ಕಾಡಾನೆಯು ಕೃಷಿಕರ ತೋಟದೊಳಗೆ ನುಗ್ಗಿ ಅಪಾರ ಪ್ರಮಾಣದ ಕೃಷಿ ಬೆಳೆ ಹಾನಿಗೊಳಿಸಿದೆ.

ಅರಣ್ಯ ಇಲಾಖೆಯು ಕಾಡಿನಂಚಿನಲ್ಲಿ ಆನೆ ನಿರೋಧಕ ಕಂದಕ ನಿರ್ಮಿಸಿದ್ದು, ಆದರೆ ಆನೆಗಳ ಹಿಂಡು ಕಂದಕವನ್ನೇ ಕೆಡವಿ ದಾರಿ ಮಾಡಿಕೊಂಡು ರಸ್ತೆಯನ್ನು ದಾಟಿ  ತೋಟದೊಳಗೆ ನುಸುಳುತ್ತಿರುವುದು ಸಾಮಾನ್ಯವಾಗಿದೆ. ಒಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಅಪಾರ ಕೃಷಿ ಹಾನಿಯಾಗುವುದನ್ನು ಅರಣ್ಯ ಇಲಾಖೆ  ತಪ್ಪಸುವ ಸಲುವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು  ಗ್ರಾಮಸ್ಥರುಆಗ್ರಹ ವ್ಯಕ್ತೊಡಿಸಿದ್ದಾರೆ.

Scroll to Top