ಕಡಬದ ಅಡಿಗ ಟಿವಿಎಸ್ ನಲ್ಲಿ ದ್ವಿಚಕ್ರ ವಾಹನ ಖರೀದಿಗೆ ವಿಶೇಷ ಆಫರ್ ➤ ಗಣೇಶ ಚತುರ್ಥಿಯ ಅಮೋಘ ಕೊಡುಗೆಗಳು ಆಗಸ್ಟ್ 30ರ ತನಕ ವಿಸ್ತರಣೆ

(ನ್ಯೂಸ್ ಕಡಬ) newskadaba.com ಕಡಬ ತಾಲೂಕಿನಲ್ಲಿ ಕಳೆದ 5 ವರ್ಷಗಳಿಂದ ಟಿವಿಎಸ್ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ಹೆಸರುವಾಸಿಯಾಗಿರುವ, ಟಿವಿಎಸ್ ಕಂಪೆನಿಯ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್ಸ್ ನಲ್ಲಿ ಗಣೇಶ ಚತುರ್ಥಿಯ ಅಮೋಘ ಆಫರ್ ಗಳು ನಡೆಯುತ್ತಿವೆ.

 

ಸ್ಕ್ರಾಚ್ n ವಿನ್: ಗ್ರಾಹಕರು ತಮ್ಮ ನೆಚ್ಚಿನ ಟಿವಿಎಸ್ ವಾಹನ ಖರೀದಿಯೊಂದಿಗೆ ರೂ. 2000/- ತನಕ ಕ್ಯಾಶ್ ಬ್ಯಾಕ್ ಡಿಸ್ಕೌಂಟ್ ಲಭಿಸಲಿದೆ. ಹಾಗೂ ಪ್ರತೀ ಖರೀದಿಯೊಂದಿಗೆ ಉಚಿತ ಹೆಲ್ಮೆಟ್ ಮತ್ತು ಪೆಟ್ರೋಲ್ ಲಭಿಸಲಿದೆ.

ಅತೀ ಕಡಿಮೆ ಮುಂಗಡ ಪಾವತಿ ಮತ್ತು ಬಡ್ಡಿ ದರ: BS6 ವಾಹನಗಳಿಗೆ ಮೊದಲಬಾರಿ ಅತೀ ಕಡಿಮೆ ಡೌನ್ ಪೇಮೆಂಟ್ ಮತ್ತು ಬಡ್ಡಿ ದರ ಸ್ಕೀಮ್ ಗಳನ್ನು ಟಿವಿಎಸ್ ಕ್ರೆಡಿಟ್ ಮೂಲಕ ಪರಿಚಯಿಸಲಾಗಿದೆ. ರೂ.9999/- ಮುಂಗಡ ಪಾವತಿ ಹಾಗೂ 6.99% ಬಡ್ಡಿ ದರದಲ್ಲಿ ಗ್ರಾಹಕರು ದ್ವಿಚಕ್ರ ವಾಹನ ಖರೀದಿಸಬಹುದಾಗಿದೆ.
ಸರಳ ದಾಖಲೆಯೊಂದಿಗೆ ಸ್ಥಳದಲ್ಲೇ ಸಾಲ ಸೌಲಭ್ಯವಿದ್ದು, ತಕ್ಷಣ ಮಂಜೂರಾತಿ ನಡೆಯುತ್ತದೆ.

Also Read  ನಿಮ್ಮ ಕುಟುಂಬದಲ್ಲಿ ಸಮಸ್ಯೆಗಳು ಬರಬಾರದು ಎಂದರೆ ತಪ್ಪದೇ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರ ಆಗುತ್ತದೆ

ವಾಹನ ಎಕ್ಸ್‌ಚೇಂಜ್ ಸೌಲಭ್ಯ: ಗ್ರಾಹಕರು ತಮ್ಮ ಯಾವುದೇ ಕಂಪನಿಯ ಹಳೆಯ ದ್ವಿಚಕ್ರ ವಾಹನವನ್ನು ಹೊಸ ಟಿವಿಎಸ್ ದ್ವಿಚಕ್ರ ವಾಹನದೊಂದಿಗೆ ವಿನಿಮಯ ನಡೆಸಬಹುದಾಗಿದೆ. ಅತ್ಯಧಿಕ ಮಾರುಕಟ್ಟೆ ದರದೊಂದಿಗೆ ವಿನಿಮಯಿಸಿ ರೂ. 2000/- ತನಕ ಎಕ್ಸ್‌ಚೇಂಜ್ ಬೋನಸ್ ಕೂಡಾ ಪಡೆಯಬಹುದಾಗಿದೆ.

 

ಈ ಎಲ್ಲಾ ಹಬ್ಬದ ಕೊಡುಗೆಗಳು ಕೇವಲ ಅಡಿಗ ಮೋಟಾರ್ಸ್, ಕಡಬದಲ್ಲಿ ಮಾತ್ರ ಲಭ್ಯವಿದ್ದು, ಗ್ರಾಹಕರ ಅನುಕೂಲಕ್ಕಾಗಿ ಈ ಎಲ್ಲಾ ಆಫರ್ ಗಳನ್ನು ಅಗಸ್ಟ್ 30ರ ವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7618766636 ಅಥವಾ 08251-260260 ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಗಣೇಶ ಚತುರ್ಥಿಯ ವಿಶೇಷ ದಿನದಂದು ಸುಮಾರು 20ಕ್ಕೂ ಅಧಿಕ ಗ್ರಾಹಕರಾದ ಕಡಬದ ದಿನೇಶ್, ಮಡಪ್ಪಾಡಿಯ ತೀರ್ಥೇಶ್, ಕುಟ್ರುಪಾಡಿಯ ಬಾಲಕೃಷ್ಣ ಗೌಡ, ಕೋಡಿಂಬಾಳದ ಜಯಂತಿ, ನೆಕ್ಕಿಲಾಡಿಯ ಗಂಗಾಧರ ಗೌಡ, ಪೆರಾಬೆಯ ಪೃಥ್ವಿ, ನೆಟ್ಟಣದ ಅಶ್ವಿನಿ, ಕೋಡಿಂಬಾಳದ ಸುಕುಮಾರ, ಆತೂರಿನ ಹರೀಶ್, ಸುಬ್ರಹ್ಮಣ್ಯದ ಶ್ರೀಧರ್, ಕುಂತೂರಿನ ಹರ್ಷಿತಾ, ಕಡಬದ ಚೈತ್ರಾ, ಪಂಬೆತ್ತಾಡಿಯ ಜಯಶ್ರೀ, ಮರ್ಧಾಳದ ಸೆಕೀನಾ, ಬಳ್ಪದ ರಜನೀಶ್, ನಿಂತಿಕಲ್ಲಿನ ಸುಶಾಂತ್, ಪುತ್ತೂರಿನ ಶಶಿಕುಮಾರ್, ನೆಲ್ಯಾಡಿಯ ಬಿನ್ಸನ್, ಕಡಬದ ಪುತ್ತುಮೋನು ಹಾಗೂ ಉರುವಾಳಿನ ರಾಜೇಶ್ ಮತ್ತಿತರರು ತಮ್ಮ ನೆಚ್ಚಿನ ಟಿವಿಎಸ್ ದ್ವಿಚಕ್ರ ವಾಹನ ಖರೀದಿಸಿ ಸಂಭ್ರಮಿಸಿದರು.

Also Read  ಜೇಸಿಐ ಕಡಬ ಕದಂಬ ಘಟಕದ ಕದಂಬೋತ್ಸವ -2023 ಸಮಾರೋಪ - ಇಂದು ಕಡಬದಲ್ಲಿ ಚಲನಚಿತ್ರ ನಟ ಉಮೇಶ್ ಮಿಜಾರ್ ಬಳಗದಿಂದ 'ತೆಲಿಕೆದ ಗೊಂಚಿಲ್' ಹಾಸ್ಯ ಕಾರ್ಯಕ್ರಮ

 

error: Content is protected !!
Scroll to Top