ಕೋಮಾ ಸ್ಥಿತಿಯಿಂದ ಚೇತರಿಸಿಕೊಳ್ಳದ ಪ್ರಣವ್ ಮುಖರ್ಜಿ

(ನ್ಯೂಸ್ ಕಡಬ) ನವದೆಹಲಿ, ಆ. 26. ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಕೋಮಾವಸ್ಥೆಯಲ್ಲಿದ್ದು,  ವೆಂಟಿಲೇಟರ್‌ ಸಹಾಯ ನೀಡಲಾಗಿದೆ ಎಂದು ಸೇನಾ ಸಂಶೋಧನೆ ಮತ್ತು ರೆಫರಲ್‌ ಆಸ್ಪತ್ರೆ ತಿಳಿಸಿದೆ.

ಪ್ರಸ್ತುತ ಅವರಿಗೆ ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ ನೀಡುತ್ತಿದ್ದು, ಮಂಗಳವಾರದಿಂದ ಅವರ ಮೂತ್ರಪಿಂಡದ ಶಕ್ತಿಯು ತುಂಬಾ ಕ್ಷೀಣಿಸಿದೆ ಎಂದು ಸೇನಾ ಸಂಶೋಧನೆ ಮತ್ತು ರೆಫರಲ್‌ ಆಸ್ಪತ್ರೆ ತಿಳಿಸಿದೆ. ಆಗಸ್ಟ್ 10ರಂದು ತೀವ್ರತರದ ಅನಾರೋಗ್ಯಕ್ಕೊಳಗಾದ ಇವರನ್ನು ಸೇನಾ ಸಂಶೋಧನಾ ಹಾಗೂ ರೆಫರಲ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಸಮಸ್ಯೆ ಉದ್ಭವವಾಗಿತ್ತು. ಅದಕ್ಕೂ ಮೊದಲು ಮೆದುಳು ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ನಡೆಸಿದ್ದ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು.

Also Read  ಕಳೆದ 24 ಗಂಟೆ ಅವಧಿಯಲ್ಲಿ 44,281 ಕೊರೊನಾ ಪ್ರಕರಣಗಳು ಪತ್ತೆ

error: Content is protected !!
Scroll to Top