ಸಾಮಾಜಿಕ ಮುಂದಾಳು ಪಂಜೋಡಿ ಮೋನಪ್ಪ ಗೌಡ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಆ.24. ಮರ್ಧಾಳ ಗಣೇಶ್ ಬೇಕರಿ ಹಾಗೂ ಜನರಲ್ ಸ್ಟೋರ್‌ ಮಾಲಕ ಮೋನಪ್ಪ ಗೌಡ (69) ಪಂಜೋಡಿಯವರು ಹೃದಯಾಘಾತದಿಂದ ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.

ರಾಜಕೀಯ ಹಾಗೂ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡಿದ್ದ ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Scroll to Top