ಅಜಿಲಮೊಗರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಫ್ರೀದ್ ಹಾಗೂ ಆಶಿಕ್ ಸೇಕಡಾ 92% ಅಂಕದೊಂದಿಗೆ ತೇರ್ಗಡೆ

(ನ್ಯೂಸ್ ಕಡಬ) newskadaba.com ಅಜಿಲಮೊಗರು, ಆ.13, ಸಂತ ಜಾನ್ಸ್ ಪ್ರೌಢಶಾಲೆ ಅಲ್ಲಿಪಾದೆ ವಿದ್ಯಾರ್ಥಿಗಳಾದ ಮಹಮ್ಮದ್ ಅಫ್ರೀದ್ ಮತ್ತು ಮಹಮ್ಮದ್ ಆಶಿಕ್ ಅಜಿಲಮೊಗರು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 92% ಅಂಕದೊಂದಿಗೆ ತೇರ್ಗಡೆ ಹೊಂದಿದ್ದಾರೆ.

ಮಹಮ್ಮದ್ ಅಫ್ರಿದ್ 575 ಅಂಕ ಪಡೆದು ಉನ್ನತ ತೇರ್ಗಡೆ ಹೊಂದಿದ್ದರೆ, ಮಹಮ್ಮದ್ ಆಶಿಕ್ 576 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳ ವಿಶಿಷ್ಟ ಶ್ರೇಣಿಯ ತೇರ್ಗಡೆಯೂ ಅಧ್ಯಾಪಕ ಮತ್ತು ಪೋಷಕರಲ್ಲಿ ಸಂತೋಷ ತಂದಿದೆ. ಮಹಮ್ಮದ್ ಅಫ್ರೀದ್ ಅಬ್ದುಲ್ ಜಬ್ಬಾರ್ ಮತ್ತು ಅಸ್ಮ ದಂಪತಿಗಳ ಪುತ್ರ, ಹಾಗೂ ಮಹಮ್ಮದ್ ಆಶಿಕ್ ಹೈದರ್ ಮತ್ತು ಹಫ್ಸ ದಂಪತಿಗಳ ಪುತ್ರ.

error: Content is protected !!

Join the Group

Join WhatsApp Group