ಉಪ್ಪಿನಂಗಡಿ: ಹೊಳೆಗೆ ಬಿದ್ದ ಪಿಕಪ್ ವಾಹನ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.08, ರಾಷ್ಟ್ರೀಯ ಹೆದ್ದಾರಿ 75 ರ ನೀರಕಟ್ಟೆ ಸಮೀಪ ಪಿಕಪ್ ವಾಹನವೊಂದು ಹೊಳೆ ದಾಟುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಘಟನೆ ಶನಿವಾರದಂದು ನಡೆದಿದೆ.

ಗೋಳಿತೊಟ್ಟು ಸಮೀಪದ ಕಾಂಚನ ಎಂಬಲ್ಲಿ ಒಳರಸ್ತೆಯಿಂದ ಹೆದ್ದಾರಿಗೆ ಬರುತ್ತಿದ್ದ ಪಿಕಪ್ ವಾಹನವು ಹೆದ್ದಾರಿ ಬದಿಯಲ್ಲಿನ ಹೊಳೆ ದಾಟುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಉರುಳಿ ಬಿದ್ದಿದೆ. ಚಾಲಕನು ಕೂಡಲೇ ಪಿಕಪ್ ವಾಹನದಿಂದ ಹೊರಗೆ ಹಾರಿ ಅಪಾಯದಿಂದ ಪಾರಾಗಿದ್ದಾರೆ. ಪಿಕಪ್ ವಾಹನವನ್ನು ಸ್ಥಳೀಯರ ಸಹಕಾರದಿಂದ ಹೊಳೆಯಿಂದ ಮೇಲಕ್ಕೆತ್ತಲಾಗಿದೆ.

Scroll to Top