(ನ್ಯೂಸ್ ಕಡಬ) newskadaba.com ಕಾನ್ಪುರ್,ಸೆ.13, ಟೀಂ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ ಸಂಚರಿಸುತ್ತಿದ್ದ ರೇಂಜ್ ರೋವರ್ ಕಾರಿನ ಟೈರ್ ಸಿಡಿದಿದ್ದು, ಅದೃಷ್ಟವಶಾತ್ ರೈನಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುರೇಶ್ ರೈನಾ ಅವರು ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸಲು ಘಾಜಿಯಾಬಾದ್ ನಿಂದ ಕಾನ್ಪುರ್‍ಗೆ ರೇಂಜ್ ರೋವರ್ ಕಾರಲ್ಲಿ ಸಂಚರಿಸುತ್ತಿದ್ದ ವೇಳೆ ಇಟಾವಾದ ಫ್ರೆಂಡ್ಸ್ ಕಾಲೋನಿ ಬಳಿ ಕಾರಿನ ಹಿಂಬದಿ ಟೈರ್ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿ ಸ್ಟೆಪ್ನಿ ಇಲ್ಲದ ಕಾರಣ ಸ್ಥಳೀಯ ಪೊಲೀಸರು ರೈನಾಗೆ ಮತ್ತೊಂದು ವಾಹನದ ವ್ಯವಸ್ಥೆ ಮಾಡಿ ಕಳುಹಿಸಿದ್ದಾರೆ. ಘಟನೆಯಲ್ಲಿ ರೈನಾ ಅವರಿಗೆ ಯಾವುದೇ ತರಹದ ಗಾಯಗಳಾಗಿಲ್ಲ ಎಂದು ಡಿಎಸ್‍ಪಿ ರಾಜೇಶ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.