ಗ್ಯಾಂಗ್​ಸ್ಟರ್ ವಿಕಾಸ್ ದುಬೆ ಪೊಲೀಸರ ಗುಂಡೇಟಿಗೆ ಬಲಿ

(ನ್ಯೂಸ್ ಕಡಬ) newskadaba.com ನವದೆಹಲಿ,ಜು.10:  8 ಮಂದಿ ಪೊಲೀಸರ ಹತ್ಯೆಕೋರ, ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಯನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಪೊಲೀಸ್​ ಕಾರು ಇಂದು ಬೆಳಗ್ಗೆ ಕಾನ್ಪುರದ ಬಳಿ ಪಲ್ಟಿಯಾಗಿತ್ತು.

 

ಬಂಧಿತ ಆರೋಪಿ ವಿಕಾಸ್​ ದುಬೆಯನ್ನು ಮಧ್ಯ ಪ್ರದೇಶದ ಉಜ್ಜಯಿನಿಯಿಂದ ಉತ್ತರ ಪ್ರದೇಶದ ಶಿವ್ಲಿಗೆ ಕರೆದೊಯ್ಯಲಾಗುತ್ತಿತ್ತು. ಕಾನ್ಪುರದ ಸಮೀಪ ಟೋಲ್​ ಪ್ಲಾಜಾ ಕ್ರಾಸ್​ ಮಾಡಿದ ಬಳಿಕ ಕಾರು ಪಲ್ಟಿಯಾಗಿತ್ತು ಎಂದು ತಿಳಿದು ಬಂದಿದೆ. ಈ ವೇಳೆ ವಿಕಾಸ್​ ದುಬೆ ಪೊಲೀಸರ ಬಳಿ ಇದ್ದ ಗನ್​ ಕಿತ್ತುಕೊಂಡು,ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈ ಎನ್​ಕೌಂಟರ್​​ನಲ್ಲಿ ವಿಕಾಸ್​ ದುಬೈ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಕುಟುಂಬದಲ್ಲಿ ಒಬ್ಬರೇ ಇದ್ದು, ಕೊರೋನಾ ಬಂತೆಂದರೆ ಸಾಕು ಸರ್ಕಾರದಿಂದ ಉಚಿತ ಆಹಾರಧಾನ್ಯ ವಿತರಣೆ

 

error: Content is protected !!
Scroll to Top