ಉಳ್ಳಾಲ: ಒಂದೇ ಕುಟುಂಬದ 17 ಮಂದಿಗೆ ಕೋವಿಡ್- 19 ಪಾಸಿಟಿವ್

(ನ್ಯೂಸ್ ಕಡಬ)newskadaba.com ಉಳ್ಳಾಲ, ಜೂ.27, ಉಳ್ಳಾಲದ ಪ್ರಥಮ ಸೋಂಕಿತೆಯ ಮನೆಯಲ್ಲಿದ್ದ ಎಲ್ಲಾ 16 ಮಂದಿ ಸದಸ್ಯರಿಗೆ ಸೋಂಕು ತಗುಲಿದ್ದು, ಮಹಿಳೆ ಸೇರಿದಂತೆ ಒಂದೇ ಮನೆಯ 17 ಸದಸ್ಯರಿಗೆ ಸೋಂಕು ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ.

ಉಳ್ಳಾಲ ಪ್ರದೇಶದಲ್ಲಿ ಪೊಲೀಸರು ಸೇರಿದಂತೆ 22 ಮಂದಿಗೆ ಸೋಂಕು ಶನಿವಾರ ದೃಢವಾಗಿದೆ. ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ, ದೇರಳಕಟ್ಟೆ, ಅಸೈಗೋಳಿ ಸೇರಿ ಸೋಂಕಿತರ ಸಂಖ್ಯೆ 29ಕ್ಕೇರಿದ್ದು ಒರ್ವ ಮಹಿಳೆ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಆರಂಭದಲ್ಲಿ ಉಳ್ಳಾಲ ಆಝಾದ್ ನಗರದ 57ರ ಹರೆಯದ ಮಹಿಳೆಯೋರ್ವರಿಗೆ ಸೋಂಕು ತಗುಲಿತ್ತು. ಅವರಿಗೆ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳ ಹಿಂದೆ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬದ 16 ಮಂದಿ ಸದಸ್ಯರ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಇಂದು ಎಲ್ಲಾ 16 ಮಂದಿಗೆ ಸೋಂಕು ದೃಢಪಟ್ಟಿದ್ದು, ಆರೋಗ್ಯ ಇಲಾಖೆ ಇನ್ನಷ್ಟೇ ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಬೇಕಿದೆ. ಈ ಮನೆಯ ಇಬ್ಬರು ಸದಸ್ಯರು ಸೌದಿಯಿಂದ ಆಗಮಿಸಿದ್ದು, ಅವರು ಖಾಸಗಿ ಕ್ವಾರಂಟೈನ್‍ನಲ್ಲಿದ್ದು, ಇವರ ಸಂಪೂರ್ಣ ಮಾಹಿತಿ ತಿಳಿದು ಬಂದಿಲ್ಲ.

Also Read  ಬಂಟ್ವಾಳ: ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಪ್ರಕರಣ ➤ ಬಸ್ ತಡೆದು ಸ್ಥಳೀಯರ ಪ್ರತಿಭಟನೆ

error: Content is protected !!
Scroll to Top