(ನ್ಯೂಸ್ ಕಡಬ) newskadaba.com ಕಡಬ, ಜೂ.22. ಬೈಕ್ ಗಳ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಎರಡೂ ಬೈಕಿನ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಕೋಡಂದೂರು ಎಂಬಲ್ಲಿ ಸೋಮವಾರದಂದು ನಡೆದಿದೆ.

ಗಾಯಳು ಸವಾರರನ್ನು ಕಡಬ ತಾಲೂಕು ಬಂಟ್ರ ಗ್ರಾಮದ ಪಣೆಬೈಲು ನಿವಾಸಿ ಯತೀಂದ್ರ ರೈ ಎಂಬವರ ಪುತ್ರ ಪ್ರಮೋದ್ ಹಾಗೂ ರೆಂಜಿಲಾಡಿ ಗ್ರಾಮದ ಖಂಡಿಗ ನಿವಾಸಿ ಗಣೇಶ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಕಡಬದ 108 ಆಂಬ್ಯುಲೆನ್ಸ್ ಮೂಲಕ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.









