ವಿದ್ಯುತ್ ಶಾಕ್ ಗೆ ಕೃಷಿಕ ಬಲಿ



(ನ್ಯೂಸ್ ಕಡಬ)newskadaba.com ಬಂಟ್ವಾಳ, ಜೂ. 17, ವಿದ್ಯುತ್ ಶಾಕ್ ಹೊಡೆದು ಕೃಷಿಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಗುಂಡಿಮಜಲು ಎಂಬಲ್ಲಿ ನಡೆದಿದೆ.





ಮೃತಪಟ್ಟವರನ್ನು ಗುಂಡಿಮಜಲು ನಿವಾಸಿ ಬಾಸ್ಕರ್ ಗೌಡ ಎಂದು ಗುರುತಿಸಲಾಗಿದೆ. ಅವರು ಮನೆಗೆ ನೀರು ಸಂಗ್ರಹಕ್ಕಾಗಿ ತೋಟದಲ್ಲಿರುವ ಕೃಷಿ ಪಂಪ್ ಸೆಟ್ ನ ಸ್ವಿಚ್ ಹಾಕಲು ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆನ್ನಲಾಗಿದೆ. ಇವರು ಸುಮಾರು ಹೊತ್ತು ಆದರೂ ಮನೆಗೆ ಬಾರದೆ ಇದ್ದುದ್ದರಿಂದ ಅವರ ಪತ್ನಿ ಪ್ರಿಯಾಂಕ ಅವರು ಪಂಪ್ ಹೌಸ್ ಬಳಿ ತೆರಳಿ ನೋಡಿದಾಗ ಕೆಳಗೆ ಬಿದ್ದಿದ್ದರು. ಅವರು ಪಂಪ್ ಸ್ವಿಚ್ ಅದುಮಿದಾಗ ಸ್ವಿಚ್ ಬೋರ್ಡ್ ನಲ್ಲಿ ವಿದ್ಯುತ್ ಹರಿದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ವಿಟ್ಲ ಠಾಣಾ ಎಸ್. ಐ.ವಿನೋದ್ ರೆಡ್ಡಿ ಹಾಗೂ ಸಿಬ್ಬಂದಿಗಳು ಬೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






error: Content is protected !!
Scroll to Top