ಬೆಳ್ತಂಗಡಿ: ಬಾಲಕ ಸೇರಿ ಇಬ್ಬರು ಫಲ್ಗುಣಿ ನದಿಯಲ್ಲಿ ಮುಳುಗಿ ಮೃತ್ಯು



ಬೆಳ್ತಂಗಡಿ, ಮಾ.26: ಆಕಸ್ಮಿಕವಾಗಿ ಫಲ್ಗುಣಿ ನದಿಗೆ ಬಿದ್ದು ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಕೊಡಿಂಗೇರಿ ಎಂಬಲ್ಲಿ ನಡೆದಿದೆ.
ಮೃತರನ್ನು ಶಿರ್ತಾಡಿ ಬಳಿಯ ಪಣಪಿಲ್ ದರ್ಖಾಸು ನಿವಾಸಿ ಮಹಾಬಲ ಪೂಜಾರಿ ಎಂಬವರ ಪುತ್ರ ವಾಸುದೇವ (22) ಮತ್ತು ಶಿರ್ತಾಡಿ ಗ್ರಾಮದ ಕೊಣಾಜೆ ಕೊಡಿಂಜ ನಿವಾಸಿ ಸಾಧು ಪೂಜಾರಿ ಎಂಬವರ ಪುತ್ರ ಇಶಾನ್ (8) ಎಂದು ಗುರುತಿಸಲಾಗಿದೆ.





ಅವರು ಹೊಸಂಗಡಿ ಗ್ರಾಮದ ಸುನೀಲ್ ಎಂಬವರ ಮನೆಗೆ ಹೋಗಿದ್ದು, ಇಂದು ಬೆಳಿಗ್ಗೆ ಸುನೀಲ್ ಹುಲ್ಲು ಕೀಳಲು ತೋಟದ ಕಡೆಗೆ ಹೋಗಿದ್ದರು. ಆ ಸಂದರ್ಭದಲ್ಲಿ ಈ ಇಬ್ಬರೂ ಕೂಡ ಫಲ್ಗುಣಿ ನದಿ ಹತ್ತಿರದಲ್ಲೇ ಇರುವ ತೋಟದ ಕಡೆಗೆ ಹೋಗಿದ್ದು, ನಂತರ ನಾಪತ್ತೆಯಾಗಿದ್ದರು.






ಅವರ ಹುಡುಕಾಟ ನಡೆಸಿದಾಗ ಈ ಇಬ್ಬರೂ ಕೂಡಾ ತೋಟಕ್ಕೆ ತಾಗಿಕೊಂಡಂತೆ ಇರುವ ನದಿ ತೀರದ ಬಂಡೆ ಹಲ್ಲಿನ ಕೆಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top