ಮಂಗಳೂರಿನಲ್ಲಿ ತಡೆಗೋಡೆ ಕುಸಿತ: ಇಬ್ಬರು ಕಾರ್ಮಿಕರು ಮೃತ್ಯು



ಮಂಗಳೂರು, ಫೆ.28: ಕಂಪೌಂಡ್ ಬಳಿ ಕೆಲಸ‌ ಮಾಡುತ್ತಿದ್ದ ಕಾರ್ಮಿಕರ ಮೇಲೆ ಮಣ್ಣು ಕುಸಿದು ಇಬ್ಬರು ಮೃತಪಟ್ಟ ಘಟನೆ ನಗರದ ಬಂಟ್ಸ್ ಹಾಸ್ಟೆಲ್‌ನ ಕರಂಗಲ್ಪಾಡಿ ಜಂಕ್ಷನ್ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ.





ಮೃತ ಕಾರ್ಮಿಕರನ್ನು ಬಾಗಲ್‌ಕೋಟೆಯ ಬಿಮೇಶ್‌ ಹಾಗೂ ಬೆಂಗಾಲ ಮೂಲದ ಮುಝ್ರಿಕುಲ್‌ ಎಂದು ಗುರುತಿಸಲಾಗಿದೆ.






ಕಂಪೌಂಡ್ ಕುಸಿದ ಪರಿಣಾಮ ಐವರು ಮಣ್ಣಿನಡಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಪಾಂಡೇಶ್ವರ ಹಾಗೂ ಕದ್ರಿಯ ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ರಕ್ಷಣಾ ಕಾರ್ಯಾಚಾರಣೆ ಭರದಿಂದ ಸಾಗಿದೆ.

 

error: Content is protected !!
Scroll to Top