(ನ್ಯೂಸ್ ಕಡಬ) newskadaba.com, ಜು.07 ಉಡುಪಿ (ಕೊಲ್ಲೂರು): ಭಕ್ತರೊಬ್ಬರ ಬ್ಯಾಗ್ನಿಂದ ₹80,000 ನಗದು ಕದ್ದಿದ್ದ ಮೂವರು ಮಹಿಳಾ ಕಳ್ಳರನ್ನು ಕೊಲ್ಲೂರು ಪೊಲೀಸರು ಕೇವಲ 24 ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ನೇತ್ರಾವತಿ (33), ಶಾರದಾ (50) ಮತ್ತು ದುರ್ಗಮ್ಮ (44).
ಜುಲೈ 5 ರಂದು ದೇವಸ್ಥಾನಕ್ಕೆ ಬಂದಿದ್ದ ನಿಮಿಷಾ ಎಂಬ ಭಕ್ತೆಯ ವ್ಯಾನಿಟಿ ಬ್ಯಾಗ್ನಿಂದ ₹80,000 ಇದ್ದ ಪರ್ಸ್ ಅನ್ನು ಈ ಮಹಿಳೆಯರು ಕಕಾವೂ ಮಾಡಿದ್ದರು.ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ, ಸಾರ್ವಜನಿಕರು ತೆಗೆದ ಚಿತ್ರಗಳು ಹಾಗೂ ತಾಂತ್ರಿಕ ಪುರಾವೆಗಳ ನೆರವಿನಿಂದ ಆರೋಪಿಗಳನ್ನು ಪತ್ತೆಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತರಾದ ದುರ್ಗಮ್ಮ ಮತ್ತು ಶಾರದಾ ವಿರುದ್ಧ ಈಗಾಗಲೇ ಮೈಸೂರು, ಬೆಂಗಳೂರು ರೈಲ್ವೆ ನಿಲ್ದಾಣ ಹಾಗೂ ಭದ್ರಾವತಿ ಪೊಲೀಸ್ ಠಾಣೆಗಳಲ್ಲಿ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.









