ಕುಮಾರಧಾರ ನದಿಯಲ್ಲಿ ಸ್ನಾನಕ್ಕಿಳಿದ ಯುವಕ ಕಣ್ಮರೆ ➤ ಶೋಧ ಕಾರ್ಯ ಆರಂಭ



(ನ್ಯೂಸ್ ಕಡಬ) newskadaba.com ಕಡಬ, ಫೆ.27. ಸ್ನಾನಕ್ಕೆಂದು ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿರುವ ಘಟನೆ ಕುಮಾರಧಾರ ನದಿಯಲ್ಲಿ ಗುರುವಾರದಂದು ನಡೆದಿದೆ.





ನಾಪತ್ತೆಯಾಗಿರುವ ಯುವಕನನ್ನು ಕೊಯಿಲ ಜನತಾ ಕಾಲೋನಿ ನಿವಾಸಿ ಯೂಸುಫ್ ಎಂಬವರ ಪುತ್ರ ಅರ್ಫಾದ್ (22) ಎಂದು ಗುರುತಿಸಲಾಗಿದೆ. ಅರ್ಫಾದ್ ಗುರುವಾರದಂದು ತನ್ನ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಕೊಯಿಲ ಗ್ರಾಮದ ಸುದೆಂಗಳ ಸಮೀಪ ಕುಮಾರಧಾರ ನದಿಗಿಳಿದಿದ್ದು, ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ. ಕುಮಾರಧಾರ‌ ನದಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.






error: Content is protected !!
Scroll to Top