ಶ್ರೀನಿವಾಸ್‍ ಡೆಂಟಲ್‍ ಕಾಲೇಜಿಗೆ 16 ರ್ಯಾಂಕ್

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.18. ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಪ್ರಸ್ತುತ ಸಾಲಿನ ಘಟಿಕೋತ್ಸವದ ಸಮಾರಂಭಕ್ಕೆ ನಗರದ ಶ್ರೀನಿವಾಸ್‍ಇನ್ಸ್ಟಿಟ್ಯೂಟ್‍ ಆಫ್‍ ಡೆಂಟಲ್ ಸೈನ್ಸ್, ಮುಕ್ಕದ ವಿದ್ಯಾರ್ಥಿಗಳು ಹಲವಾರು ರ್ಯಾಂಕ್‍ಗಳನ್ನು ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳಾದ ಡಾ. ಸಭಾ ಪೆರಿಯೊಡೊಂಟಾಲಜಿ ವಿಭಾಗದಲ್ಲಿ 6ನೇ ರ್ಯಾಂಕ್, ಪೆಡೊಡೊಂಟಿಕ್ ವಿಭಾಗದಲ್ಲಿ 9ನೇ ರ್ಯಾಂಕ್, ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ವಿಭಾಗದಲ್ಲಿ 10ನೇ ರ್ಯಾಂಕ್, ಡಾ. ದುರ್ಗಾ ಹೆಚ್ ವೊರಾ ಪ್ರೊಸ್ತಾಡೊಂಟಿಕ್ ವಿಭಾಗದಲ್ಲಿ 7ನೇ ರ್ಯಾಂಕ್, ಪೆಡೊಡೊಂಟಿಕ್ ವಿಭಾಗದಲ್ಲಿ 8ನೇ ರ್ಯಾಂಕ್, ಡಾ. ಅಫ್ರಾ ಕುಡ್ಸಿಯಾ ಪೆಡೊಡೊಂಟಿಕ್ ವಿಭಾಗದಲ್ಲಿ 8ನೇ ರ್ಯಾಂಕ್, ಪ್ರಿ ಕ್ಲಿನಿಕಲ್ ಪ್ರೊಸ್ತಾಡೊಂಟಿಕ್ ವಿಭಾಗದಲ್ಲಿ 10ನೇ ರ್ಯಾಂಕ್, ಡಾ. ಅಕ್ಷತಾ ಕೆ ಶೆಟ್ಟಿ ಪೆಡೊಡೊಂಟಿಕ್ ವಿಭಾಗದಲ್ಲಿ 6ನೇ ರ್ಯಾಂಕ್, ಪ್ರಿ ಕ್ಲಿನಿಕಲ್ ಪ್ರೊಸ್ತಾಡೊಂಟಿಕ್ ವಿಭಾಗದಲ್ಲಿ 8ನೇ ರ್ಯಾಂಕ್, ಡಾ. ಅಶ್ವದಿ ಜಿ ನಾಯರ್‍ ಆರ್ತಾಡೊಂಟಿಕ್ ವಿಭಾಗದಲ್ಲಿ 7ನೇ ರ್ಯಾಂಕ್, ಪೆಡೊಡೊಂಟಿಕ್ ವಿಭಾಗದಲ್ಲಿ ಡಾ. ಸುಹಾಸ್ 9ನೇ ರ್ಯಾಂಕ್, ಡಾ. ಸಂಬ್ರಾ ಶಿರೀನ್ 5ನೇ ರ್ಯಾಂಕ್, ಡಾ. ರತ್ನಾಶ್ರೀ ಎಂ. ವಿ. 8ನೇ ರ್ಯಾಂಕ್, ಫಾರ್ಮಾಕಾಲಜಿ ವಿಭಾಗದಲ್ಲಿ ಡಾ. ನವಾಮಿ 3ನೇ ರ್ಯಾಂಕ್, ಡಾ. ಜಿಮಿ ಜಾರ್ಜ್ 8ನೇ ರ್ಯಾಂಕ್, ಡಾ. ಪೂಜಾ ಎಂ. 10ನೇ ರ್ಯಾಂಕ್ ಪಡೆದಿದ್ದಾರೆ ಎಂದು ಶ್ರೀನಿವಾಸ್‍ ಇನ್ಸ್ಟಿಟ್ಯೂಟ್‍ ಆಫ್‍ಡೆಂಟಲ್ ಸೈನ್ಸ್‍ನಡೀನ್‍ ಡಾ. ಮನೋಜ್ ವರ್ಮ ಪ್ರಕಟಣೆ ತಿಳಿಸಿದ್ದಾರೆ.

Also Read  ಕಡಬ ಘಟಕದ ಪ್ರಭಾರ ಘಟಕಾಧಿಕಾರಿ ತೀರ್ಥೇಶ್ ಅಮೈ ಅವರಿಗೆ ಪದೋನ್ನತಿ

error: Content is protected !!
Scroll to Top