(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.12. ಕನ್ನಡದ ಪ್ರಸಿದ್ಧ ನಟಿ ಹಾಗೂ ಮತ್ತೊಂದು ಕಾರಿನವರ ಮಧ್ಯೆ ಕಾರಿಗೆ ಸೈಡ್ ಕೊಡುವ ವಿಚಾರದಲ್ಲಿ ನಡು ರಸ್ತೆಯಲ್ಲೇ ಸಿನೆಮಾ ಮಾದರಿಯ ಹೊಡೆದಾಟ ನಡೆದಿದ್ದು, ಹೊಡೆದಾಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವುದಕ್ಕಾಗಿ ಕನ್ನಡದ ಪ್ರಸಿದ್ಧ ನಟಿಯೋರ್ವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಎಂಬಲ್ಲಿ ಮತ್ತೊಂದು ಕಾರಿನವರೊಂದಿಗೆ ಸೈಡ್ ಕೊಡೋ ವಿಚಾರದಲ್ಲಿ ವಾಗ್ವಾದ ನಡೆದಿದೆ. ವಾಗ್ವಾದವು ಮಿತಿಮೀರಿ ಸಾರ್ವಜನಿಕರ ಎದುರೇ ನೂಕಾಟ – ತಳ್ಳಾಟ ನಡೆದಿದ್ದು, ಹೊಡೆದಾಟದ ದೃಶ್ಯಗಳನ್ನು ಸಾರ್ವಜನಿಕರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಲ್ಲಿ ಹರಿಯ ಬಿಟ್ಟಿದ್ದಾರೆ. ವೀಡಿಯೋ ಇದೀಗ ವೈರಲ್ ಆಗಿದೆ.













