ಮಾಣಿ: ದ್ವಿಚಕ್ರ ವಾಹನ ಮತ್ತು ಕಾರು ನಡುವೆ ಢಿಕ್ಕಿ ➤ ಸವಾರರಿಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ಫೆ.02. ಟೊಯೋಟಾ ಇಟಿಯೋಸ್ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರರಿಬ್ಬರು ಗಾಯಗೊಂಡ ಘಟನೆ ಮಾಣಿ ಜಂಕ್ಷನ್‌ ನಲ್ಲಿ ಭಾನುವಾರದಂದು ಸಂಭವಿಸಿದೆ.

ಬುಡೋಳಿ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಹಾಗೂ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಮಾಣಿ ಜಂಕ್ಷನ್ ನಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸವಾರರಾದ ಅಬ್ದುಲ್ ರಜಾಕ್ ಹಾಗೂ ಅವರ ಪತ್ನಿ ಖತೀಜಮ್ಮ ಗಾಯಗೊಂಡಿದ್ದು, ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿದ್ರೆ ಈ ರಾಜ್ಯದಲ್ಲಿ ರೇಷನ್ ಕ್ಯಾನ್ಸಲ್..!

error: Content is protected !!
Scroll to Top