ಕಡಬ: ಅಕ್ರಮ ಕಸಾಯಿಖಾನೆಗೆ ದಾಳಿ, ಓರ್ವನ ಬಂಧನ ➤ ಕದ್ದ ಜಾನುವಾರುಗಳ ಸಹಿತ ಕತ್ತಿ, ತೂಕದ ಮಾಪನ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜ.11. ಕಳವು ಮಾಡಿ ತಂದಿರುವ ಜಾನುವಾರು ಅಡ್ಡೆಗೆ ದಾಳಿ ನಡೆಸಿದ ಕಡಬ ಪೋಲೀಸರು ಓರ್ವನನ್ನು ಬಂಧಿಸಿ, ದನಕರುಗಳು ಸೇರಿದಂತೆ ಕತ್ತಿ, ತೂಕದ ಮಾಪನಗಳನ್ನು ವಶಪಡಿಸಿಕೊಂಡ ಘಟನೆ ಕಡಬ ತಾಲೂಕಿನ ಕೊಯ್ಲ ಗ್ರಾಮದ ಬಡ್ಡಮೆ ಎಂಬಲ್ಲಿ ನಡೆದಿದೆ.



ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಕಡಬ ಪೋಲೀಸರು ಮಹಮ್ಮದ್ ಮುಸ್ತಫಾ ಎಂಬಾತನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಇಲಿಯಾಸ್ ಪರಾರಿಯಾಗಿದ್ದಾನೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ದಾಳಿ ಮಾಡಿದ ಪೋಲೀಸರು ಆರೋಪಿಯ ಮನೆಯ ಹಿಂಭಾಗದಲ್ಲಿ ಕಟ್ಟಿ ಹಾಕಿರುವ ದನಕರುಗಳನ್ನು ಹಾಗೂ ಮಚ್ಚು, ತೂಕದ ಮಾಪನ, ಬುಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ದನಕರುಗಳು ಅಂದಾಜು ಮೌಲ್ಯ 20,000 ಹಾಗೂ ಇತರ ಸಾಮಾಗ್ರಿಗಳ ಮೌಲ್ಯ 4,000 ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಕಳವು ಮತ್ತು ಪ್ರಾಣಿ ಹಿಂಸೆ ಪ್ರಕರಣ ದಾಖಲಾಗಿದೆ.

Also Read  ಬೆಂಗಳೂರಿನಲ್ಲಿ ಕಾರು ಅಪಘಾತ ➤ ಪುತ್ತೂರಿನ ಮೂವರು ಗಂಭೀರ

error: Content is protected !!
Scroll to Top